ಆಲ್ ಇಂಡಿಯಾ ಎಸ್​ಎಸ್​ಕೆ ಕ್ರಿಕೆಟ್ ಟೂರ್ನಾಮೆಂಟ್

NEW SSK
Published on

ಹುಬ್ಬಳ್ಳಿ : ವಿಎಕೆ ಫೌಂಡೇಶನ್ ಸಹಯೋಗದೊಂದಿಗೆ ಎಸ್​ಎಸ್​ಕೆ ಯೂಥ ಕ್ಲಬ್ ವತಿಯಿಂದ ಹಾಗೂ ಆಲ್ ಇಂಡಿಯಾ ಎಸ್​ಎಸ್​ಕೆ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ ನಗರದ ನೆಹರು ಕ್ರೀಡಾಂಗಣದಲ್ಲಿ ಜರುಗಿತು.

ಈ ಟೂರ್ನಮೆಂಟ್​ದಲ್ಲಿ 30 ತಂಡಗಳು ಭಾಗವಹಿಸಿದ್ದವು. ಗುಳೇದಗುಡ್ಡ ತಂಡ ಪ್ರಥಮ ಸ್ಥಾನ ಪಡೆಯಿತು. ಹುಬ್ಬಳ್ಳಿಯ ಶ್ರೀ ರಾಮ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.

ಶಾಸಕ ಮಹೇಶ ಟೆಂಗಿನಕಾಯಿ, ಮಾಜಿ ಶಾಸಕ ಅಶೋಕ ಕಾಟವೆ, ವಿಎಕೆ ಫೌಂಡೇಶನ್ ಅಧ್ಯಕ್ಷ ವೆಂಕಟೇಶ ಕಾಟವೆ ಅವರು ವಿಜೇತರಿಗೆ ನಗದು ಮತ್ತು ಪಾರಿತೋಷಕ ಬಹುಮಾನ ವಿತರಿಸಿದರು.

ಹುಡಾ ಮಾಜಿ ಅಧ್ಯಕ್ಷ ನಾಗೇಶ ಕಲಬುರ್ಗಿ, ಹನಮಂತಸಾ ನಿರಂಜನ, ಭಾಸ್ಕರ ಜಿತೂರಿ, ಕೆ.ಪಿ. ಪೂಜಾರಿ, ಮಂಜುನಾಥ ಕಾಟಕರ್, ರಾಜು ಕಾಳೆ, ಶಿವು ಮೆಣಸಿನಕಾಯಿ, ಡಿ.ಕೆ. ಚವ್ಹಾಣ ವಿನಾಯಕ ಲದವಾ, ಸುಭಾಷ ಭಾಂಡಗೆ, ಪ್ರವೀಣ ಪವಾರ, ಶಂಕರ ಹಬೀಬ, ಸಂತೋಷ ಜಿತೂರಿ, ಅಮೃತ ಭಾಂಡಗೆ, ಪ್ರಕಾಶ ಬುರಬುರೆ, ದೇವದಾಸ ಹಬೀಬ, ಪ್ರಶಾಂತ ಶಿಂಗ್ರಿ, ಪವನ ಜರತಾರಘರ, ರಾಜು ಜರತಾರಘರ, ಮಂಜುನಾಥ ಊಟವಾಲೆ, ಆನಂದ ಬಾಕಳೆ ಹಾಗೂ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net