ಅಂಚೆ ಇಲಾಖೆ ಖಾಸಗೀಕರಣಕ್ಕೆ ವಿರೋಧ

WhatsApp Image 2022-07-22 at 4.17.58 PM
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಖಿಲ ಭಾರತ ಗ್ರಾಮೀಣ ಅಂಚೆ ಸೇವಕರ ಸಂಘದ ವತಿಯಿಂದ ಶುಕ್ರವಾರ ವಿಜಯಪುರ ಅಂಚೆ ಅಧೀಕ್ಷಕರ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು. ಸಂಘದ ಕಾರ್ಯಾಧ್ಯಕ್ಷ ಗುರು ಬೆಳ್ಳುಬ್ಬಿ , ಸಂಘದ ಅಧ್ಯಕ್ಷ ಬಿ.ಎನ್.ಬಿರಾದಾರ, ಸಾಯಿ ಪಾಟೀಲ, ಪಿ.ಎಂ.ನಾಯ್ಕೋಡಿ, ಐ.ಸಿ. ಹಂಚಿನಾಳ, ವಿಠ್ಠಲಸಿಂಗ ರಜಪೂತ ಇತರರಿದ್ದರು.
Published on

ವಿಜಯಪುರ:ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಖಿಲ ಭಾರತ ಗ್ರಾಮೀಣ ಅಂಚೆ ಸೇವಕರ ಸಂಘದ ವತಿಯಿಂದ ಶುಕ್ರವಾರ ವಿಜಯಪುರ ಅಂಚೆ ಅಧೀಕ್ಷಕರ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.

ಅಖಿಲ ಭಾರತ ಗ್ರಾಮೀಣ ಅಂಚೆ ಸೇವಕರ ಸಂಘದ ಖಜಾಂಚಿ ವಿಠ್ಠಲಸಿಂಗ ರಜಪೂತ ಮಾತನಾಡಿ, ಇಲಾಖೆಯನ್ನು ಖಾಸಗೀಕರಣಗೊಳಿಸಲು ಈಗಾಗಲೇ ಕೇಂದ್ರ ಸರ್ಕಾರ ಹುನ್ನಾರ ನಡೆಸುತ್ತಿರುವುದು ಖಂಡನೀಯ. ಅದಕ್ಕಾಗಿ ಎಲ್ಲ ಅಂಚೆ ಸಂಘಟನೆಗಳು ಒಟ್ಟಾಗಿ ಹೋರಾಟಕ್ಕೆ ಮುಂದಾಗಿವೆ. ಈ ಹೋರಾಟದಲ್ಲಿ ಇಲಾಖೆಯ ಉಳಿವಿಗಾಗಿ ಸಂಘಟನೆಗೊಳ್ಳಬೇಕಿದೆ ಎಂದು ತಿಳಿಸಿದರು.


ಲೆಕ್ಕ ಪರಿಶೋಧಕ ಎಸ್.ಆರ್.ನರಳೆ ಮಾತನಾಡಿ, ಗ್ರಾಮೀಣ ಅಂಚೆ ನೌಕರರನ್ನು ಕಾಯಂಗೊಳಿಸಬೇಕು. ಅಂಚೆ ಸೇವೆಗಳ ಖಾಸಗೀಕರಣ ಸರಿಯಾದ ನಿರ್ಧಾರ ಅಲ್ಲ. ನೌಕರರು ಮತ್ತು ಅವರ ಕುಟುಂಬಕ್ಕೆ ವೈದ್ಯಕೀಯ ಸೌಲಭ್ಯದ ಅನುದಾನ ನೀಡಬೇಕು. ಗುಂಪು ವಿಮೆಯ ಮೊತ್ತವನ್ನು 5 ಲಕ್ಷ ರೂ.ಗಳಿಗೆ ಹೆಚ್ಚಿಸಬೇಕು. ನೌಕರರಿಗೆ ನೀಡುವ ಅವೈಜ್ಞಾನಿಕ ಗುರಿ ನಿಲ್ಲಿಸಬೇಕು. ನೌಕರರ ಮಕ್ಕಳ ಶಿಕ್ಷಣಕ್ಕೆ ಭತ್ಯೆ, ಹೆರಿಗೆ ರಜೆ ಕುರಿತು ಕೇಂದ್ರ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.


ಸಂಘದ ಕಾರ್ಯಾಧ್ಯಕ್ಷ ಗುರು ಬೆಳ್ಳುಬ್ಬಿ ಮಾತನಾಡಿದರು. ಸಂಘದ ಅಧ್ಯಕ್ಷ ಬಿ.ಎನ್.ಬಿರಾದಾರ, ಸಾಯಿ ಪಾಟೀಲ, ಪಿ.ಎಂ.ನಾಯ್ಕೋಡಿ, ಐ.ಸಿ. ಹಂಚಿನಾಳ, ಪಿ.ವಿ.ಪಾಟೀಲ, ಸಹ ಕಾರ್ಯದರ್ಶಿ ಓಂಕಾರ ಕೆ.ಎಸ್., ಎಸ್.ಆರ್.ಮೋರೆ, ಎಸ್.ವೈ.ತೋರತ, ಎಸ್.ಎಂ.ಹಿರೇಮಠ, ಮಹಾದೇವ ಚಿಪ್ಪರಕಟ್ಟಿ, ಆರ್.ಜಿ.ಕಂಬಾರ, ಚನ್ನು ಬಿರಾದಾರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net