ಉದ್ಯೋಗ ಕಡಿತ ಆದೇಶ ವಾಪಸ್ ಮನವಿಗೆ ಮನ್ನಣೆ

radio new
Published on

ಮಂಗಳೂರು: ದೂರದರ್ಶನ ಮತ್ತು ಆಕಾಶವಾಣಿಯಲ್ಲಿ ಉದ್ಯೋಗಿಗಳ ಸಂಖ್ಯೆ ಕಡಿತಗೊಳಿಸುವಂತೆ ಪ್ರಸಾರ ಭಾರತಿ ಮಾಡಿದ್ದ ಆದೇಶವನ್ನು ಆಕಾಶವಾಣಿ ಮತ್ತು ದೂರದರ್ಶನ ಇಂಜಿನಿಯರಿಂಗ್ ಉದ್ಯೋಗಿಗಳ ಸಂಘದ(ಆದಿ) ಮನವಿಯ ಹಿನ್ನೆಲೆಯಲ್ಲಿ ಹಿಂಪಡೆದಿದೆ.

ಉದ್ಯೋಗಿಗಳ ಸಂಖ್ಯೆ ಕಡಿತ ಮಾಡುವಂತೆ ಮಾ.2ರಂದು ಆದೇಶ ಮಾಡಲಾಗಿತ್ತು. ಇದನ್ನು ವಿರೋಧಿಸಿ ಆದಿ ಸಂಘಟನೆ ಕೇಂದ್ರ ಮಾಹಿತಿ, ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ಅವರಿಗೆ ಮನವಿ ಮಾಡಿತ್ತು. ಬಳಿಕ ಮಾ.7ರಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರು ಜಿಲ್ಲೆಗೆ ಆಗಮಿಸಿದ್ದ ವೇಳೆ ಸಂಘಟನೆಯ ರಾಷ್ಟ್ರೀಯ ವಕ್ತಾರ ಚಂದ್ರಶೇಖರ ಶೆಟ್ಟಿ ಮಂಗಳೂರು ನೇತೃತ್ವದ ನಿಯೋಗ ಸಚಿವರನ್ನು ಭೇಟಿ ಮಾಡಿ, ಆದೇಶ ಅವೈಜ್ಞಾನಿಕವಾಗಿದ್ದು, ಹಿಂಪಡೆಯಬೇಕೆಂದು ಮನವಿ ಮಾಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net