

ಉಡುಪಿ: ಭಾರತದಲ್ಲಿ ಎಲ್ಲಾ ಧರ್ಮ, ಜಾತಿ, ಮತಗಳ ಜನರು ಸಾಮರಸ್ಯದಿಂದ ಜೀವಿಸುತ್ತಿದ್ದಾರೆ. ಸರ್ವತ್ರ ಸಹೃದಯತೆ ಇದಕ್ಕೆ ಮೂಲ ಕಾರಣ. ಎಲ್ಲರಲ್ಲೂ ದೇವರಿದ್ದಾನೆ ಎಂಬ ಪರಿಕಲ್ಪನೆ ಭಾರತೀಯ ತತ್ವಜ್ಞಾನದ ಅಂತಿಮ ಸಾರ ಎಂದು ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದರು.
ಕೃಷ್ಣ ಮಠದ ರಾಜಾಂಗಣದಲ್ಲಿ ಭಾರತೀಯ ವಿದ್ವತ್ ಪರಿಷತ್ತು, ಪರ್ಯಾಯ ಶ್ರೀಪುತ್ತಿಗೆ ಮಠ ಮತ್ತು ನವದೆಹಲಿಯ ಕೇಂದ್ರೀಯ ಸಂಸತ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ನಡೆದ ಅಖಿಲ ಭಾರತ ಪ್ರಾಚ್ಯವಿದ್ಯಾ ಸಮ್ಮೇಳನ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಭಾರತೀಯ ತತ್ವಶಾಸ್ತ್ರಗಳಲ್ಲಿ ಶಿಷ್ಟ ಮತ್ತು ದುಷ್ಟ ಎಂಬ 2 ವರ್ಗಗಳಿದ್ದು, ಸಜ್ಜನರಿಗೆ ಸ್ವರ್ಗ. ದುಷ್ಟರಿಗೆ ನರಕ ಎಂಬುದಾಗಿ ಮಾತ್ರ ತಿಳಿಸಲಾಗಿದೆ. ಅನ್ಯಮತೀಯ ಗ್ರಂಥಗಳಲ್ಲಿ ತಮ್ಮ ಧರ್ಮದವರಿಗೆ ಸ್ವರ್ಗ. ಉಳಿದವರಿಗೆ ನರಕ ಎಂಬಂತ ಉಲ್ಲೇಖವಿದೆ. ಇದರಿಂದ ಭಾರತೀಯ ಸಂಸತಿಯ ವೈಶಿಷ್ಟ ಅರಿವಾಗುತ್ತದೆ ಎಂದರು.
ಸಮಗ್ರ ಭಾರತದ ವಿದ್ವಾಂಸರ ಐತಿಹಾಸಿಕ ಸಮ್ಮೇಳನ ಉಡುಪಿಯಲ್ಲಿ ಯಶಸ್ವಿಯಾಗಿದ್ದು, ಭಾರತ ವಿಶ್ವಗುರು ಸ್ಥಾನ ಪುನ ಸ್ಥಾಪಿಸಿದೆ. ಸಂಸತ ಎಲ್ಲಾ ಭಾಷೆಗಳಿಗೂ ಮೂಲವಾಗಿದ್ದು, ಉಳಿದೆಲ್ಲಾ ಭಾಷೆಗಳು ಪ್ರಾದೇಶಿಕ, ದೇಶೀಯ, ಅಂತಾರಾಷ್ಟ್ರೀಯವಾಗಿದ್ದರೆ ಸಂಸತ ಅಂತಲೋರ್ಕೀಯ ಭಾಷೆ. ಇದನ್ನು ವ್ಯಾಪಕವಾಗಿ ಬೆಳೆಸುವ ನಿಟ್ಟಿನಲ್ಲಿ ಸಮ್ಮೇಳನ ಮಹತ್ವದ ಪಾತ್ರ ವಹಿಸಿದೆ ಎಂದರು.
ಸಂಸತ ಭಾರತೀ ಸಂಟನಾ ಕಾರ್ಯದರ್ಶಿ ದಿನೇಶ್ ಕಾಮತ್ ಮಾತನಾಡಿ, ಭಗವದ್ಗೀತೆ ಅತ್ಯಂತ ಪ್ರಸ್ತುತವಾದ ಗ್ರಂಥ. ಆಹಾರ ಪದ್ಧತಿಯಿಂದ ಮನುಷ್ಯ ಗುಣಗಳು ನಿರ್ಧರವಾಗುತ್ತದೆ ಎಂಬ ಬಗ್ಗೆ ಉಲ್ಲೇಖವಿದೆ. ಈ ವಿಷಯದಲ್ಲಿ ಸಂಶೋಧನೆಗೆ ಆವಕಾಶವಿದೆ. ಇದರಿಂದ ಪ್ರಾಚಿನ ಜ್ಞಾನದ ಮೌಲ್ಯವನ್ನು ಗಟ್ಟಿಧ್ವನಿಯಲ್ಲಿ ಪ್ರಸ್ತುತಪಡಿಸಬಹುದು. ಇವೆಲ್ಲಕ್ಕೂ ಮುಖ್ಯವಾಗಿ ಸಂಸತವನ್ನು ಸಾಮಾನ್ಯ ಜನರಿಗೂ ತಲುಪಿಸುವ ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ಸಂಸತ ಭಾರತಿ ಬುಡಕಟ್ಟು ಪ್ರದೇಶ, ಗುಡಿಸಲು ಪ್ರದೇಶಗಳಲ್ಲಿಯೂ ಸಂಸತ ಶಿಬಿರ ಆಯೋಜಿಸುತ್ತಿದೆ ಎಂದರು.
ಹರಿದ್ವಾರದಲ್ಲಿ ಮುಂದಿನ ಸಮ್ಮೇಳನ
ಕೇಂದ್ರೀಯ ಸಂಸತ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶ್ರೀನಿವಾಸ ವರಖೇಡಿ ಮಾತನಾಡಿ, ಮುಂದಿನ 2 ವರ್ಷದಲ್ಲಿ ದೇಶದ ವಿವಿಧ ಭಾಗಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸ್ಥಾನಿಯಮಟ್ಟದ ಗೋಷ್ಠಿಗಳನ್ನು ನಡೆಸಲಾಗುವುದು. ಇದರಿಂದ ಸ್ಥಳಿಯ ವಿದ್ವಾಂಸರಿಗೆ ವೇದಿಕೆ ನೀಡಿದಂತಾಗುತ್ತದೆ. ಜೊತೆಗೆ ಉತ್ತಮ ಗುಣಮಟ್ಟದ ಪ್ರಬಂಧಗಳನ್ನು ಆಯ್ಕೆ ಮಾಡುವುದು ಸುಲಭವಾಗುತ್ತದೆ. ನಂತರ ದೊಡ್ಡಮಟ್ಟದ ಸಮ್ಮೇಳನ ಹರಿದ್ವಾರದ ಪತಂಜಲಿ ಯೋಗಪೀಠದಲ್ಲಿ ಆಯೋಜಿಸಲಾಗುವುದು ಎಂದು ತಿಳಿಸಿದರು.
ಪುತ್ತಿಗೆ ಮಠದ ಕಿರಿಯ ಶ್ರೀ ಸುಶ್ರೀಂದ್ರ ತೀರ್ಥ ಸ್ವಾಮೀಜಿ ಉಪಸ್ಥಿತರಿದ್ದರು. ಎಐಒಸಿ ಅಧ್ಯೆ ಪ್ರೊ. ಸರೋಜಾ ಭಾಟಿ ಅಧ್ಯಕ್ಷತೆ ವಹಿಸಿದ್ದರು. ಮಹೋಪಾಧ್ಯಾಯ ಪ್ರೊ. ಕೊರಾಡ ಸುಬ್ರಹ್ಮಣ್ಯಂ, ಭಾರತೀಯ ವಿದ್ವತ್ ಪರಿಷತ್ತಿನ ಅಧ್ಯಕ್ಷ ಡಾ. ವೀರನಾರಾಯಣ ಪಾಂಡುರಂಗಿ, ಕರ್ನಾಟಕ ಸಂಸತ ವಿವಿ ಡೀನ್ ಪ್ರೊ. ಶಿವಾನಿ, ಎಐಒಸಿ ಕಾರ್ಯದರ್ಶಿ ಪ್ರೊ.ಕವಿತಾ ಹೋಲೆ, ಅರುಣರಂಜನ್ ಮಿಶ್ರ, ಕೇಂದ್ರೀಯ ಸಂಸತ ವಿಶ್ವವಿದ್ಯಾಲಯದ ಕುಲಸಚಿವ ಮುರಳೀಕೃಷ್ಣ, ಪುತ್ತಿಗೆ ಮಠದ ದಿವಾನ್ ನಾಗರಾಜ ಆಚಾರ್ಯ, ಕಾರ್ಯದರ್ಶಿ ಪ್ರಸನ್ನ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು. ಗೋಪಾಲಾಚಾರ್ಯ ಸ್ವಾಗತಿಸಿದರು. ಶ್ರಿನಿವಾಸ ಆಚಾರ್ಯ ಮತ್ತು ಡಾ. ಶ್ರುತಿ ಕಾರ್ಯಕ್ರಮ ನಿರೂಪಿಸಿದರು.