

ಉಡುಪಿ: ಬೆಂಗಳೂರಿನ ಭಾರತೀಯ ವಿದ್ಯತ್ ಪರಿಷತ್ತು, ಪರ್ಯಾಯ ಶ್ರೀಪುತ್ತಿಗೆ ಮಠ ಮತ್ತು ನವದೆಹಲಿಯ ಕೇಂದ್ರೀಯ ಸಂಸತ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಅ. 24, 25 ಮತ್ತು 26 ರಂದು ಕೃಷ್ಣ ಮಠದ ರಾಜಾಂಗಣದಲ್ಲಿ ಅಖಿಲ ಭಾರತ ಪ್ರಾಚ್ಯವಿದ್ಯಾ ಸಮ್ಮೇಳನ ಆಯೋಜಿಸಲಾಗಿದ್ದು, ಯೋಗಗುರು ಬಾಬಾ ರಾಮದೇವ್ ಉದ್ಘಾಟಿಸಲಿದ್ದಾರೆ ಎಂದು ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ಶ್ರೀಪಾದರು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು, ಭಂಡಾರಕೇರಿ ಮಠದ ಶ್ರೀ ವಿದ್ಯೇಶ ತೀರ್ಥ ಶ್ರೀಪಾದರು, ಪುತ್ತಿಗೆ ಕಿರಿಯ ಶ್ರೀ ಸುಶೀಂದ್ರ ತೀರ್ಥ ಶ್ರೀಪಾದರು, ಸುಬ್ರಹ್ಮಣ್ಯ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು, ಆಚಾರ್ಯ ಬಾಲಕೃಷ್ಣ, ಪದ್ಮಶ್ರೀ ಚಮ ಕೃಷ್ಣಶಾಸ್ತ್ರಿ, ಮಂಗಳೂರು ಶ್ರೀನಿವಾಸ ವಿವಿ ಕುಲಾಧಿಪತಿ ಡಾ. ರಾವೇಂದ್ರ ರಾವ್, ಸೆಂಟ್ರಲ್ ಸಂಸತ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶ್ರೀನಿವಾಸ ವರಖೇಡಿ, ಎಐಒಸಿ ಅಧ್ಯೆ ಪ್ರೊ. ಸರೋಜಾ ಭಾಟಿ, ಎಐಹಿಸಿ ಕಾರ್ಯದರ್ಶಿ ಪ್ರೊ.ಕವಿತಾ ಹೋಲೆ ಭಾಗವಹಿಸಲಿದ್ದಾರೆ. ಭಾರತದ ಹಲವು ಭಾಗಗಳಿಂದ 300ಕ್ಕೂ ಹೆಚ್ಚು ವಿದ್ವಾಂಸರು ಆಗಮಿಸಲಿದ್ದಾರೆ. ಭಾರತದ ಪ್ರಸಿದ್ಧ ಪ್ರಕಟಣಾ ಸಂಸ್ಥೆಗಳಿಂದ ಪುಸ್ತಕ ಪ್ರದರ್ಶನ, 30ಕ್ಕೂ ಅಧಿಕ ಪುಸ್ತಕಗಳ ಬಿಡುಗಡೆ ನಡೆಯಲಿದೆ ಎಂದರು.
ಭಾರತೀಯ ವಿದ್ವತ್ ಪರಿಷತ್ತಿನ ಅಧ್ಯಕ್ಷ ಡಾ. ವೀರನಾರಾಯಣ ಪಾಂಡುರಂಗಿ ಮಾತನಾಡಿ, ಸಮ್ಮೇಳನದಲ್ಲಿ ತರುಣರ ಕವಿಗೋಷ್ಠಿ, ಯುವ ವಿದ್ವಾಂಸ-ರ, ವಿದುಷಿಯರಿಂದ ವಾಕ್ಯಾರ್ಥ ಗೋಷ್ಠಿಗಳು, ಅಷ್ಟಾವಧಾನ ಕಾರ್ಯಕ್ರಮ, ಸಾಂಸತಿಕ ಕಾರ್ಯಕ್ರಮ, ಶಿಕ್ಷಣ, ಬಾಲಸಾಹಿತ್ಯ, ಕನ್ನಡ, ಸಂಸತ, ಪಾಲಿ, ಉರ್ದು, ಯೋಗ, ಆಯುರ್ವೇದ ಮುಂತಾದ ಒಟ್ಟು 23 ವಿಷಯಗಳಲ್ಲಿ ಪ್ರತ್ಯೇಕ ವಿಚಾರಸಂಕಿರಣಗಳು ನಡೆಯಲಿವೆ. ಭಾರತದ ಕೇಂದ್ರೀಯ ಸಂಸತ ವಿಶ್ವವಿದ್ಯಾಲಯ, ಸಂಪೂರ್ಣಾನಂದ ಸಂಸತ ವಿಶ್ವವಿದ್ಯಾಲಯ, ರಾಷ್ಟ್ರೀಯ ಸಂಸತ ವಿಶ್ವವಿದ್ಯಾಲಯ ಮುಂತಾದ ವಿಶ್ವವಿದ್ಯಾಲಯಗಳ 18 ಕುಲಪತಿಗಳು ಉಪಸ್ಥಿತರಿರುವರು. ಪತಂಜಲಿಯ ಶ್ರೀ ಬಾಬಾ ರಾಮದೇವ ಜಿ, ಶ್ರೀ ಆಚಾರ್ಯ ಬಾಲಕೃಷ್ಣ ನೇತೃತ್ವದಲ್ಲಿ ಮೂರು ದಿನಗಳ ಕಾಲ ಮುಂಜಾನೆ 6 ರಿಂದ 7ರ ವರೆಗೆ ಯೋಗ- ಧ್ಯಾನಾದಿ ತರಗತಿಗಳೂ ನಡೆಯಲಿವೆ ಎಂದು ಮಾಹಿತಿ ನೀಡಿದರು.
ಭಾರತೀಯ ವಿದ್ವತ್ ಪರಿಷತ್ತಿನ ಪ್ರಮುಖರಾದ ಪ್ರೊ. ಶಿವಾನಿ, ಡಾ. ಭಾಸ್ಕರ ಜೋಶಿ, ದಿನಕರ ಮರಾಠೆ, ಪುತ್ತಿಗೆ ಮಠದ ಕಾರ್ಯದರ್ಶಿ ಪ್ರಸನ್ನ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.