

ವಿಜಯವಾಣಿ ಸುದ್ದಿಜಾಲ ಧಾರವಾಡ ನಗರದ ಎಸ್‌ಡಿಎಂ ವೈದ್ಯಕೀಯ ಕಾಲೇಜಿನ ಚರ್ಮರೋಗ ಮತ್ತು ದೈಹಿಕ ಶಿಕ್ಷಣ ವಿಭಾಗ ಮತ್ತು ಜಿಲ್ಲಾ ಚೆಸ್ ಅಸೋಸಿಯೇಷÀನ್‌ನ ಹಾಗೂ ಇಂಟರ್‌ನ್ಯಾಶನಲ್ ಆರ್ಬಿಟರ್ ಪ್ರಮೋದ್ ಮೋರೆ ಅವರ ಸಹಯೋಗದೊಂದಿಗೆ ಎಸ್‌ಡಿಎಂ ಡೆಂಟಲ್ ಕಾಲೇಜಿನಲ್ಲಿ ಇತ್ತೀಚೆಗೆ ಅಖಿಲ ಭಾರತ ಮುಕ್ತ ಫಿಡೆ ಚೆಸ್ ಪಂದ್ಯಾವಳಿ ಆಯೋಜಿಸಲಾಗಿತ್ತು. ಎಸ್‌ಡಿಎಂ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ. ನಿರಂಜನ ಕುಮಾರ್ ಚಾಲನೆ ನೀಡಿದರು. ದೇಶದ 12 ಟೈಟಲ್ಡ್ ಮತ್ತು 2 ಅಂತಾರಾಷ್ಟಿçÃಯ ಆಟಗಾರರು ಸೇರಿ 277 ಆಟಗಾರರು ಭಾಗವಹಿಸಿದ್ದರು. ಮಹಾರಾಷ್ಟçದ ಆಕಾಶ್ ದಳವಿ ಪ್ರಥಮ, ನವಲಗುಂದ ನಿರಂಜನ್ ದ್ವಿತೀಯ ಮತ್ತು ಮೊಹಮ್ಮದ್ ನುಬೇರಷಾ ಶೇಖ್ ತೃತೀಯ ಸ್ಥಾನ ಪಡೆದರು. ಎಸ್‌ಡಿಎಂ ವೈದ್ಯಕೀಯ ಮಹಾವಿದ್ಯಾಲಯದ ಉಪ ಪ್ರಾಚಾರ್ಯ ಡಾ. ದೀಪಕ ಕಣಬೂರ ಉಪಸ್ಥಿತಿಯಲ್ಲಿ ವಿಜೇತರಿಗೆ ಟ್ರೋಫಿ ಮತ್ತು ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ಪಂದ್ಯಾವಳಿಯ ನಿರ್ದೇಶಕ ಡಾ. ನವೀನ್ ಕೆ.ಎನ್., ಸಹ ನಿರ್ದೇಶಕಿ ಡಾ. ಶ್ವೇತಾ ಪ್ರಭು, ಸಂಘಟನಾ ಕಾರ್ಯದರ್ಶಿ ಅನುರಾಗ ಖನ್ನೂರ್, ಎಸ್‌ಡಿಎಂ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ಎಸ್.ಜಿ. ಕೊಪ್ಪದ, ಡಾ. ಶರದ್ ಜವಳಿ, ಎಸ್‌ಡಿಎಂ ದಂತ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಬಲರಾಮ್ ನಾಯ್ಕ್, ಇತರರಿದ್ದರು.