

ಮಂಗಳೂರು : ನವ ಮಂಗಳೂರು ಬಂದರು ಸ್ಪೋಟ್ಸ್ ಕೌನ್ಸಿಲ್ ಆಶ್ರಯದಲ್ಲಿ ಅಖಿಲ ಭಾರತ ಬೃಹತ್ ಬಂದರುಗಳ ಟೇಬಲ್ ಟೆನಿಸ್ ಮತ್ತು ಕೇರಂ ಟೂರ್ನಮೆಂಟ್ ಮಂಗಳವಾರ ಪಣಂಬೂರಿನ ನವ ಮಂಗಳೂರು ಬಂದರು ಪ್ರಾಧಿಕಾರದ ಬಿಸಿನೆಸ್ ಡೆವಲಪ್‌ಮೆಂಟ್ ಸೆಂಟರ್‌ನಲ್ಲಿ ಉದ್ಘಾಟನೆಗೊಂಡಿತು.
ನವ ಮಂಗಳೂರು ಬಂದರು ಪ್ರಾಧಿಕಾರದ ಡೆಪ್ಯುಟಿ ಚೇರ್ಮನ್ ಕೆ.ಜಿ.ನಾಥ್ ಅವರು ಟೂರ್ನಮೆಂಟ್ ಉದ್ಘಾಟಿಸಿದರು. ಸಿವಿಒ ಪದ್ಮನಾಭ ಆಚಾರ್ ಮತ್ತು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ನವ ಮಂಗಳೂರು ಬಂದರು ಸ್ಪೋಟ್ಸ್ ಕೌನ್ಸಿಲ್‌ನ ಅಧ್ಯಕ್ಷ ಕ್ಯಾ.ಎಸ್.ಆರ್.ಪಟ್ನಾಯಕ್ ಸ್ವಾಗತಿಸಿದರು. ನವ ಮಂಗಳೂರು ಬಂದರು ಪ್ರಾಧಿಕಾರದ ತಂಡ ಸಹಿತ ಒಟ್ಟು 9 ಬೃಹತ್ ಬಂದರುಗಳ ಟೂರ್ನಮೆಂಟ್‌ನಲ್ಲಿ ಭಾಗವಹಿಸುತ್ತಿದ್ದು, ಸಮಾರೋಪ ಸಮಾರಂಭ ಡಿ.1ರಂದು ಸಾಯಂಕಾಲ 5.30ಕ್ಕೆ ನಡೆಯಲಿದೆ.