ಕಿಕ್ ಬಾಕ್ಸಿಂಗ್ ಪಂದ್ಯದಲ್ಲಿ ಮೈಸೂರು ವಿವಿ ತಂಡ ಭಾಗಿ

kick boxing - Copy
2022-23ನೇ ಸಾಲಿನ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಿಕ್ ಬಾಕ್ಸಿಂಗ್ ಪಂದ್ಯಾವಳಿಯಲ್ಲಿ ಭಾಗವಹಿಸಿರುವ ಮೈಸೂರು ವಿವಿಯ ತಂಡದ ಜತೆ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಪಿ.ಕೃಷ್ಣಯ್ಯ, ಎಚ್.ರಾಜು , ಎಸ್.ಜಶ್ವಂತ್ ಇದ್ದರು.
Published on

ಮೈಸೂರು: ಉತ್ತರಪ್ರದೇಶದ ವೀರ್ ಬಹದ್ದೂರ್‌ಸಿಂಗ್ ಪೂರ್ವಾಂಚಲ ವಿಶ್ವವಿದ್ಯಾಲಯದಲ್ಲಿ ಸೋಮವಾರ ಆರಂಭಗೊಂಡಿರುವ 2022-23ನೇ ಸಾಲಿನ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಿಕ್ ಬಾಕ್ಸಿಂಗ್ ಪಂದ್ಯಾವಳಿಯಲ್ಲಿ ಮೈಸೂರು ವಿವಿ ತಂಡ ಭಾಗಿಯಾಗಿದೆ.

ವಿವಿಯ ದೈಹಿಕ ಶಿಕ್ಷಣ ವಿಭಾಗದ ವತಿಯಿಂದ ಸ್ಪೋರ್ಟ್ಸ್ ಪೆವಿಲಿಯನ್ ಮೈದಾನದಲ್ಲಿ ಇತ್ತೀಚೆಗೆ ತಂಡದ ಆಯ್ಕೆ ಪ್ರಕ್ರಿಯೆ ನಡೆದಿತ್ತು. ಮಹಾರಾಜ ಕಾಲೇಜಿನ ಡಿ.ಆರ್.ಪ್ರೀತಿ, ವಿದ್ಯಾವಿಕಾಸ್ ಪ್ರಥಮ ದರ್ಜೆ ಕಾಲೇಜಿನ ಎ.ಸಹನಾ, ಕ್ರೈಸ್ಟ್ ಕಾಲೇಜಿನ ಎಸ್.ಶಾಲಿನಿ ಆಯ್ಕೆಯಾಗಿದ್ದು, ತರಬೇತುದಾರ ಎಸ್. ಜಸ್ವಂತ್, ವ್ಯವಸ್ಥಾಪಕ ಎಚ್.ರಾಜು ಜತೆ ತಮ್ಮ ತಂಡ ಪಂದ್ಯಾವಳಿಯಲ್ಲಿ ಭಾಗಿಯಾಗಿದೆ ಎಂದು ಮೈಸೂರು ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಪಿ.ಕೃಷ್ಣಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net