ಅಖಿಲ ಭಾರತ ಅಂತರ ವಿವಿ ಪುರುಷರ ಕಬಡ್ಡಿ ಟೂರ್ನಿಗೆ ಚಾಲನೆ

udp-23-ppc
Published on

ಉಡುಪಿ: ಮನುಷ್ಯನ ಮಾನಸಿಕ ಆರೋಗ್ಯ ಮತ್ತು ದೈಹಿಕ ಆರೋಗ್ಯಪೂರ್ಣವಾಗಿ ರಬೇಕು. ಇದಕ್ಕೆ ಕಬಡ್ಡಿಯಂಥ ಆಟೋಟ ಚಟುವಟಿಕೆಗಳು ಕಾರಣವಾಗಿವೆ. ಅನ್ಯರನ್ನು ಸೋಲಿಸುವ ಗುರಿಗಿಂತ ನಾವು ಬೆಳೆಯಬೇಕೆನ್ನುವ ಚಿಂತನೆ ಪಂದ್ಯಗಳಲ್ಲಿ ಕಾಣಬಹುದು ಎಂದು ಅದಮಾರು ಮಠ ಶಿಕ್ಷಣ ಸಂಸ್ಥೆ ಅಧ್ಯಕ್ಷ ಶ್ರೀ ಈಶಪ್ರಿಯತೀರ್ಥರು ಹೇಳಿದರು.

ಗುರುವಾರ ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗ ಹಾಗೂ ಪೂರ್ಣಪ್ರ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರಗಳ ಆಶ್ರಯದಲ್ಲಿ ಪೂರ್ಣಪ್ರ ಕಾಲೇಜಿನ ಕ್ರೀಡಾಂಗಣದಲ್ಲಿ 4 ದಿನಗಳ ಅಖಿಲ ಭಾರತ ಅಂತರ್​ ವಿಶ್ವವಿದ್ಯಾನಿಲಯ ಪುರುಷರ ಕಬಡ್ಡಿ ಪಂದ್ಯಾಟಕ್ಕೆ ಚಾಲನೆ ನೀಡಿ ಮಾತನಾಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ವಿವಿಯ ಉಪಕುಲಪತಿ ಪ್ರೊ. ಜಯರಾಜ್​ ಅಮೀನ್​ ಮಾತನಾಡಿ, ಕ್ರೀಡೆ ಜಾತಿ, ಮತ, ಧರ್ಮದ ಚೌಕಟ್ಟುಗಳನ್ನು ಮೀರಿ ನಿಂತಿದೆ. ಕಬಡ್ಡಿ ಆಕ್ರಮಣ ಹಾಗೂ ರಕ್ಷಣೆ ಎರಡನ್ನೂ ಸಮ್ಮಿಳಿತಗೊಂಡ ಕ್ರೀಡೆ ಎಂದರು.

ಅರ್ಜುನ ಪ್ರಶಸ್ತಿ ವಿಜೇತ ಕಬಡ್ಡಿ ಆಟಗಾರ ರಾಕೇಶ್​ ಕುಮಾರ್​ ಸನ್ಮಾನಸ್ವೀಕರಿಸಿ ಮಾತನಾಡಿ, ಕ್ರೀಡೆಯಲ್ಲಿ ಯಶಸ್ಸಿಗೆ ಸುಲಭದ ಮಾರ್ಗಗಳಿಲ್ಲ. ಆಟಗಾರ ಹೆಚ್ಚೆಚ್ಚು ಪರಿಶ್ರಮಪಟ್ಟಾಗಲೇ ಯಶಸ್ಸು ಆತನಿಗೆ ಒಲಿಯುತ್ತದೆ ಎಂದರು.

ಮುಖ್ಯ ಅತಿಥಿಗಳಾಗಿ ಕಾಪು ಶಾಸಕ ಗುರ್ಮೆ ಸುರೇಶ್​ ಶೆಟ್ಟಿ, ಮುನಿಯಾಲು ಉದಯಕುಮಾರ್​ ಶೆಟ್ಟಿ, ಚಾಂಪಿಯನ್​ಷಿಪ್​ನ ಸಂಟನಾ ಕಾರ್ಯದರ್ಶಿ ಹಾಗೂ ಮಂಗಳೂರು ವಿವಿ ದೈಹಿ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಜೆರಾಲ್ಡ್​ ಸಂತೋಷ್​ ಡಿಸೋಜ ಮಾತನಾಡಿದರು.

ಕಾಲೇಜಿನ ಪ್ರಾಂಶುಪಾಲ ಡಾ.ರಾಮು ಎಲ್​., ಸಂಟನಾ ಸಮಿತಿಯ ಸಂಚಾಲಕ ಹಾಗೂ ಪೂರ್ಣಪ್ರಜ್ಞ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಸುಕುಮಾರ್​, ಅದಮಾರು ಮಠ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಡಾ.ಎ.ಪಿ.ಭಟ್​, ಮಂಗಳೂರು ವಿವಿ ದೈಹಿಕ ಶಿಕ್ಷಣ ವಿಭಾಗದ ಡಾ.ಕಿಶೋರ್​ಕುಮಾರ್​ ಸಿ.ಕೆ. ಮುಂತಾದವರು ಉಪಸ್ಥಿತರಿದ್ದರು. ಪೂರ್ಣಪ್ರಜ್ಞ ಕಾಲೇಜಿನ ಆಡಳಿತ ಮಂಡಳಿಯ ಗೌರವ ಕಾರ್ಯದರ್ಶಿ ಡಾ.ಜಿ.ಎಸ್​.ಚಂದ್ರಶೇಖರ್​ ಸ್ವಾಗತಿಸಿ, ಪ್ರಾಧ್ಯಾಪಕ ಸಂದೀಪ್​ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ದೇಶದ ನಾಲ್ಕು ವಲಯಗಳಿಂದ ಅಗ್ರಸ್ಥಾನ ಪಡೆದ ತಲಾ ನಾಲ್ಕು ತಂಡಗಳಂತೆ ಒಟ್ಟು 16 ವಿಶ್ವವಿದ್ಯಾಲಯಗಳ ತಂಡಗಳು ಟೂರ್ನಿಯಲ್ಲಿ ಭಾಗವಹಿಸಿವೆ.
ಚಿತ್ರ
ಯುಡಿಪಿ&23&ಪಿಪಿಸಿ
ಅಖಿಲ ಭಾರತ ಅಂತರ್​ ವಿಶ್ವವಿದ್ಯಾನಿಲಯ ಪುರುಷರ ಕಬಡ್ಡಿ ಪಂದ್ಯಾಟಕ್ಕೆ ಅದಮಾರು ಮಠ ಶಿಕ್ಷಣ ಸಂಸ್ಥೆ ಅಧ್ಯಕ್ಷ ಶ್ರೀ ಈಶಪ್ರಿಯತೀರ್ಥರು ಚಾಲನೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net