ಬೆಂಗಳೂರಿನಲ್ಲಿ ಅಖಿಲ ಭಾರತಿಯ ಗ್ರಾಹಕ-ರಾಜ್ಯ ಮಹಿಳಾ ಸಮಾವೇಶ

13
Published on

ಮೈಸೂರು: ಬೆಂಗಳೂರಿನಲ್ಲಿ ಜೂ.29 ಮತ್ತು 30ರಂದು ಆಯೋಜಿಸಿರುವ ಅಖಿಲ ಭಾರತಿಯ ಗ್ರಾಹಕ-ರಾಜ್ಯ ಮಹಿಳಾ ಸಮಾವೇಶ ಕುರಿತು ನಗರದಲ್ಲಿ ಶನಿವಾರ ಪೂರ್ವಭಾವಿ ಸಭೆ ಆಯೋಜಿಸಲಾಗಿತ್ತು.
ಅಖಿಲ ಭಾರತೀಯ ಗ್ರಾಹಕ ಪಂಚಾಯತ್‌ನ ಮೈಸೂರು ಘಟಕದ ಅಧ್ಯಕ್ಷ ಸಿ.ಎಸ್.ಚಂದ್ರಶೇಖರ್ ಮಾತನಾಡಿ, ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ರಾಷ್ಟ್ರೀಯ ಮಹಿಳಾ ಜಾಗರಣ ಕಾರ್ಯಗಾರ ಮತ್ತು ಎಬಿಜಿಪಿ ಕರ್ನಾಟಕ ಪ್ರಾಂತ ಮಹಿಳಾ ಸಮಾವೇಶ ಜರುಗಲಿವೆ. ಹಾಗಾಗಿ ಎರಡೂ ಕಾರ್ಯಕ್ರಮದಲ್ಲಿ ತಪ್ಪದೇ ಭಾಗವಹಿಸಬೇಕು ಎಂದು ಕೋರಿದರು.
ಗ್ರಾಹಕ ಸಮಸ್ಯೆಗಳಿಗೆ ಉತ್ತಮ ಪರಿಹಾರಗಳನ್ನು ಕಂಡುಹಿಡಿಯಲು ಈ ಸಮಾವೇಶ ಸಹಕಾರಿಯಾಗಲಿದೆ. ಶೋಷಣೆ ಮುಕ್ತ ಸಮಾಜ ನಿರ್ಮಿಸಲು ಇದು ನೆರವಾಗಲಿದೆ ಎಂದು ಹೇಳಿದರು.
ಮಹಿಳಾ ಪ್ರಮುಖ್ ಜೆ.ನಾಗಮಣಿ ಮಾತನಾಡಿ, ಸಮಾವೇದಲ್ಲಿ ಭಾಗವಹಿಸುವವರು ಮೊ.7090993966 ಸಂಪರ್ಕಿಸಿ ಮಾಹಿತಿ ಪಡೆಯಬಹುದು. ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಬೇಕು ಎಂದು ಕೋರಿದರು.
ಪಂಚಾಯತ್‌ನ ರಾಜ್ಯ ಸಂಚಾಲಕ ಜಿ.ವಿ.ರವಿಶಂಕರ್, ಸದಸ್ಯರಾದ ದಯಾನಂದ, ಸುರೇಶ್, ದರ್ಶನ್ ಮೂರ್ತಿ, ಜಯಕುಮಾರ್, ರವೀಂದ್ರ, ಶ್ರೀನಿವಾಸ್, ರಮೇಶ್, ವಲಿನಾಥ್, ಮಹಾದೇವಸ್ವಾಮಿ, ಬೈರತಿ ಲಿಂಗರಾಜು, ಚಂದ್ರಶೇಖರ್, ಕೆಂಗೇಗೌಡ, ರಾಮಚಂದ್ರ, ಹೇಮಶೆಟ್ಟಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net