ಬೆಂಗಳೂರು: ಅಖಿಲ ಭಾರತೀಯ ಗ್ರಾಹಕ ಪಂಚಾಯತ್ನ ಕರ್ನಾಟಕ ಪ್ರಾಂತ ಕಾರ್ಯಕಾರಿಣಿಯು ಇತ್ತೀಚೆಗೆ
ನಗರದ ಯಾದವ ಸ್ಮೃತಿಯಲ್ಲಿ ನಡೆಯಿತು. ಕೇಂದ್ರದಿಂದ ವೀಕ್ಷಕರಾಗಿ ಬಂದಿದ್ದ ಡಾ. ವೀಣಾ ದೀಕ್ಷಿತ್ ಕರ್ನಾಟಕ ರಾಜ್ಯ ಗ್ರಾಹಕ ಪಂಚಾಯತ್ ಕಾರ್ಯಕಾರಿಣಿ ಸಮಿತಿಯನ್ನು ಘೋಷಿಸಿದರು.
ಕಾರ್ಯಕಾರಿಣಿಯ ಅಧ್ಯಕ್ಷರಾಗಿ ನರಸಿಂಹ ನಕ್ಷತ್ರಿ ಜಿ ಮರು ಆಯ್ಕೆಗೊಂಡಿದ್ದು, ಉಪಾಧ್ಯಕ್ಷರಾಗಿ ಡಾ. ವಿಜಯ ವಿಷ್ಣು ಭಟ್ ಹಾಗೂ ಡಾ. ಬಚ್ಚೇಗೌಡ ಅವರನ್ನು ನೇಮಿಸಲಾಯಿತು. ಸಂಘಟನಾ ಮಂತ್ರಿಯಾಗಿ ರಂಗನಗೌಡ ದಂಡನ್ನವರ್, ಕಾರ್ಯದರ್ಶಿಯಾಗಿ ಗಾಯತ್ರಿ ನಾಡಿಗ್, ಕೋಶಾಧ್ಯಕ್ಷರಾಗಿ ಶ್ರೀಲಕ್ಷ್ಮಿ ಹಾಗೂ ಮಹಿಳಾ ಜಾಗರಣ ಆಯಾಮದ ಪ್ರಮುಖರಾಗಿ ಡಾ. ಚಂದ್ರಿಕಾ ಕುರುಂದ್ವಾಡ್, ಲೀಗಲ್ ಅಡ್ವೈಸರಿ ಪ್ರಮುಖರಾಗಿ ಅಡ್ವಕೇಟ್ ವಿಜಯಲಕ್ಷ್ಮಿ ಪಸೋಡಿಯವರನ್ನು ನೇಮಿಸಲಾಯಿತು.
ಗ್ರಾಹಕ ಪಂಚಾಯತಿನ ಚಟುವಟಿಕೆಗಳು ಹಾಗೂ ಗ್ರಾಹಕ ಪಂಚಾಯತಿಗೆ ಸದಸ್ಯತ್ವವನ್ನು ಪಡೆದು ಹೇಗೆ ಮುಂದೆ ಕಾರ್ಯಕರ್ತರಾಗಿ ಸಮಾಜದಲ್ಲಿ ಗ್ರಾಹಕರ ಹಿತಕ್ಕಾಗಿ ಕೆಲಸ ಮಾಡಬಹುದು ಎಂಬುದನ್ನು ಕಾರ್ಯಕರ್ತರ ಪ್ರಶ್ನೋತ್ತರಗಳಿಗೆ ಉತ್ತರ ನೀಡಿದರು. ಕಳೆದ 3 ವರ್ಷದ ಗ್ರಾಹಕ ಪಂಚಾಯಿತಿ ಕರ್ನಾಟಕ ಪ್ರಾಂತದ ಚಟುವಟಿಕೆಗಳ ವರದಿಯನ್ನು ಬಿಡುಗಡೆ ಮಾಡಲಾಯಿತು.
ಗ್ರಾಹಕರು ಸಮಾಜದಲ್ಲಿ ಹಣಕಾಸಿನ ವ್ಯವಹಾರದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಮೋಸಕ್ಕೆ ಒಳಗಾಗುತ್ತಿದ್ದು, ಅವರಿಗೆ ಜಾಗೃತಿ ನೀಡುವುದು ತುಂಬಾ ಅವಶ್ಯಕ ಎಂದು ಗ್ರಾಹಕ ಪಂಚಾಯತಿನ ಮಾರ್ಗದರ್ಶಕರಾದ ಡಾ. ಬಾಲು ಕೆಂಚಪ್ಪ ತಿಳಿಸಿದರು.
ಕಾರ್ಯಕ್ರಮದಲ್ಲಿ ಕ್ಷೇತ್ರಿಯ ಸಂಘಟನಾ ಮಂತ್ರಿ ದತ್ತಾತ್ರೇಯ ನಾಡಿಗ್, ಪ್ರಾಂತದ ಅಧ್ಯಕ್ಷ ನರಸಿಂಹ ನಕ್ಷತ್ರಿ ಮತ್ತಿತರರು ಮಾತನಾಡಿದರು. ಇದೇ ವೇಳೆ ಗ್ರಾಹಕ ಪಂಚಾಯತಿಯ ತುಮಕೂರು, ಬೆಂಗಳೂರು ಹಾಗೂ ಬಾಗಲಕೋಟೆ ಜಿಲ್ಲಾ ಕಾರ್ಯಕಾರಿಣಿ ಸಮಿತಿಗಳನ್ನು ಘೋಷಣೆ ಮಾಡಲಾಯಿತು.