ಮೈಸೂರು: ಮೈಸೂರು: ಛಾಪಾ ಕಾಗದ (ಬಾಂಡ್ ಪೇಪರ್) ದರ ಹೆಚ್ಚಳವನ್ನು ಸರ್ಕಾರ ಕೂಡಲೇ ಹಿಂಪಡೆದು, ಹಳೇ ದರವನ್ನು ಮುಂದುವರಿಸಿ ಅಗ್ಗ ದರದಲ್ಲಿ ಬಡವರಿಗೆ ಛಾಪಾ ಕಾಗದ ಸಿಗುವ ವ್ಯವಸ್ಥೆ ಮಾಡಬೇಕು ಎಂದು ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕದ ಅಧ್ಯಕ್ಷ ಸಿ.ಎಸ್.ಚಂದ್ರಶೇಖರ್ ಒತ್ತಾಯಿಸಿದರು.
ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ವತಿಯಿಂದ ಶನಿವಾರ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ರೈತರು, ಶಾಲಾ ಮಕ್ಕಳು, ಜನಸಾಮಾನ್ಯರು, ಕೂಲಿ ಕಾರ್ಮಿಕರು, ವ್ಯಾಪಾರಸ್ಥರು, ಸೇರಿದಂತೆ ಎಲ್ಲರೂ ಕರಾರು ಪತ್ರ, ಕೋರ್ಟ್ ಅಫಿಡವಿಟ್, ಜಾತಿ ಪ್ರಮಾಣ ಪತ್ರ, ಸಣ್ಣ ಹಿಡುವಳಿದಾರರ ಪ್ರಮಾಣ ಪತ್ರ ಹೀಗೆ ಹಲವು ಕೆಲಸಗಳಿಗೆ 20, 50, 100 ರೂ. ದರದಲ್ಲಿ ಛಾಪಾ ಕಾಗದ ಪತ್ರ ಸಿಗುತ್ತಿದ್ದವು. ಆದರೆ ಈಗ 100, 500 ರೂ. ಮುಖಬೆಲೆಯ ಛಾಪಾ ಕಾಗದ ಪತ್ರಗಳಿಂದ ಹೆಚ್ಚಿನ ಹೊರೆಯಾಗಿದೆ ಎಂದರು.
ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕದ ಪ್ರಧಾನ ಕಾರ್ಯದರ್ಶಿ ವಿಕ್ರಮ ಅಯ್ಯಂಗಾರ್, ಸಂಚಾಲಕರಾದ ದಯಾನಂದ್, ಅಪೂರ್ವ ಸುರೇಶ್, ಅಜಯ್ ಶಾಸ್ತ್ರಿ, ಸತೀಶ್, ಮೈಲಾ ವಿಜಯ್ ಕುಮಾರ್, ನಂಜುಂಡ, ಸರ್ವಮಂಗಳಾ, ಭಾಗ್ಯಶ್ರೀ ಇತರರು ಇದ್ದರು.