ನ.14ರಿಂದ ಅಖಿಲ ಭಾರತ ಸಹಕಾರ ಸಪ್ತಾಹ : ಸಿಎಂ ಬಿಎಸ್‌ವೈ ಉದ್ಘಾಟನೆ

BSY
Published on

ಬೆಂಗಳೂರು: ರಾಜ್ಯ ಸಹಕಾರ ಮಹಾಮಂಡಳ ನ.14ರಿಂದ ನ.20ರವರೆಗೆ 67ನೇ ಅಖಿಲ ಭಾರತ ಸಹಕಾರ ಸಪ್ತಾಹ ಏರ್ಪಡಿಸಿದೆ. ನಿವಾರ ಬೆಳಗ್ಗೆ 11 ಗಂಟೆಗೆ ವಿಧಾನಸೌಧ ಬ್ಯಾಂಕ್ವೆಟ್ ಹಾಲ್‌ನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉದ್ಘಾಟಿಸಲಿದ್ದಾರೆ.

ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಧ್ವಜಾರೋಹಣ ನಡೆಸಲಿದ್ದಾರೆ. ಶಾಸಕ ರಿಜ್ವಾನ್ ಹರ್ಷದ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಹಕಾರ ರತ್ನ ಪ್ರಶಸ್ತಿ, ವಿಶೇಷ ಸಂಚಿಕೆ ಹಾಗೂ ಮಂಡಳದ ಕಾರ್ಯಚಟುವಟಿಕೆಗಳ ಕೈಪಿಡಿ ಬಿಡುಗಡೆಯಾಗಲಿದೆ.

ಕಾರ್ಯಕ್ರಮಗಳ ವಿವರ: ನ.14ರಂದು ಬೆಂಗಳೂರು, ನ.15ರಂದು ಮಂಗಳೂರು, ನ.16ರಂದು ದಾವಣಗೆರೆ, ನ.17ರಂದು ಚಿಕ್ಕಬಳ್ಳಾಪುರ, ನ.18ರಂದು ಬೆಳಗಾವಿ, ನ.19ರಂದು ಹೊಸಪೇಟೆ ಹಾಗೂ ನ.20ರಂದು ವಿಜಯಪುರದಲ್ಲಿ ಸಪ್ತಾಹ ದಿನಾಚರಣೆ ನಡೆಯಲಿವೆ. ಕರೊನಾ ಹಿನ್ನೆಲೆಯಲ್ಲಿ ಈ ಬಾರಿ ಸರಳವಾಗಿ ಆಚರಿಸಲಾಗುತ್ತಿದೆ ಎಂದು ಮಹಾಮಂಡಳ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net