

ಮಂಡ್ಯ: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಸ್ಯಾಹಾರ ಮತ್ತು ಮಾಂಸಾಹಾರ ಎರಡೂ ಬಗೆಯ ಆಹಾರಗಳನ್ನು ವಿತರಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಅಖಿಲ ಭಾರತ ವಕೀಲರ ಒಕ್ಕೂಟದ ಕಾರ್ಯದರ್ಶಿ ಚಂದನ್ ಒತ್ತಾಯಿಸಿದರು.
ಸಮ್ಮೇಳನದಲ್ಲಿ ಮಾಂಸಾಹಾರ ನಿಷೇಧ ಎನ್ನುವುದು ಸಂವಿಧಾನಕ್ಕೆ ವಿರುದ್ಧವಾಗಿದೆ. ಮಾಂಸಾಹಾರ ನಿಕೃಷ್ಠವಲ್ಲವೆಂದು ಪ್ರತಿರೋಧ ಒಡ್ಡುವ ಅವಶ್ಯಕತೆಯಿದೆ. ಎಲ್ಲರ ಆಹಾರ ಸಂಸ್ಕೃತಿಯನ್ನು ಸಮಾನವಾಗಿ ಗೌರವಿಸಬೇಕು. ಆಹಾರ ಸಮಾನತೆ ಎಲ್ಲರೂ ಮನಗಾಣಬೇಕು. ಜಿಲ್ಲಾಡಳಿತ ಮಾಂಸಾಹಾರದ ಆಯೋಜನೆ ಮಾಡಬೇಕು. ಇಲ್ಲವಾದಲ್ಲಿ ಪ್ರಗತಿಪರ ಸಂಘಟನೆಗಳು ಸಂಘಟಿತವಾಗಿ ಮಾಂಸಾಹಾರ ಒದಗಿಸುವ ಕಾರ್ಯಕ್ಕೆ ಅಖಿಲ ಭಾರತ ವಕೀಲರ ಒಕ್ಕೂಟ ಕೈಜೋಡಿಸಲಿದೆ ಎಂಬ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಅಧ್ಯಕ್ಷ ವಕೀಲ ಬಿ.ಟಿ.ವಿಶ್ವನಾಥ್, ಜೆ.ರಾಮಯ್ಯ, ಆಕಾಶ್, ಸುಚೀಂದ್ರ, ಚೇತನ್, ಕಿಶೋರ್ ಇದ್ದರು.