ಫೆ.14ರಂದು ಜನತಾ ಪ್ರಣಾಳಿಕೆ ಬಿಡುಗಡೆ: ಭಾರತ ಬಹುಜನ ಸಮಾಜ ಪಾರ್ಟಿ ಜಿಲ್ಲಾಧ್ಯಕ್ಷ ಅನಿಲ್‌ಕುಮಾರ್ ಮಾಹಿತಿ

All India Bahujan Samaj Party press conference Mandya
Published on

ಮಂಡ್ಯ: ಸ್ವಾಭಿಮಾನಿ-ಸ್ವಾವಲಂಬಿ ನವಕರ್ನಾಟಕ ನಿರ್ಮಾಣಕ್ಕಾಗಿ ಜನತಾ ಪ್ರಣಾಳಿಕೆಯ ಬಿಡುಗಡೆ ಕಾರ್ಯಕ್ರಮವನ್ನು ಫೆ.14ರಂದು ಬೆಳಗ್ಗೆ 11 ಗಂಟೆಗೆ ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಭಾರತ ಬಹುಜನ ಸಮಾಜ ಪಾರ್ಟಿ ಜಿಲ್ಲಾಧ್ಯಕ್ಷ ಅನಿಲ್‌ಕುಮಾರ್ ತಿಳಿಸಿದರು.

ಕಾಂಗ್ರೆಸ್, ಬಿಜೆಪಿ ಪಕ್ಷ ಇಲ್ಲಿಯವರೆಗೆ ಯಾವುದೇ ಸಮಸ್ಯೆಗಳನ್ನು ಬಗೆಹರಿಸಲು ವಿಫಲವಾಗಿದೆ. ಮಾತ್ರವಲ್ಲದೆ ಈ ಪಕ್ಷಗಳು ಜಾರಿಗೆ ತಂದ ನೀತಿಗಳು ಬಹುಸಂಖ್ಯಾತ ಜನಗಳ ಹಿತಕ್ಕೆ ವಿರುದ್ಧವಾಗಿರುವುದು ವೈಫಲ್ಯತೆಗೆ ಕಾರಣವಾಗಿದೆ. ಆದ್ದರಿಂದ ರೈತ, ದಲಿತ, ಕನ್ನಡ ಭಾಷಾ, ಕಾರ್ಮಿಕ, ಮಹಿಳಾ ಮತ್ತು ವಿದ್ಯಾರ್ಥಿ, ಯುವಜನ, ಚಳವಳಿಗಳು ರೂಪಿಸಿರುವ ಪ್ರಾದೇಶಿಕ ರಾಜಕೀಯ ಪಕ್ಷದ ಮುನ್ನೋಟವುಳ್ಳ ಪ್ರಣಾಳಿಕೆಯನ್ನು ಹೊರತರಲಾಗುತ್ತಿದೆ. ಇದನ್ನು ಜನರ ಮುಂದಿಟ್ಟು, ಜನತಾ ಅಭಿಪ್ರಾಯವನ್ನು ಸಂಗ್ರಹಿಸಲಾಗುವುದು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಸಭೆಯಲ್ಲಿ ಮಾಜಿ ಸಚಿವರಾದ ಸಿ.ಎ.ಇಬ್ರಾಹಿಂ, ಬಿ.ಟಿ.ಲಲಿತಾ ನಾಯಕ್, ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ರಾಷ್ಟ್ರೀಯ ಸಂಯೋಜಕ ಎಂ.ಗೋಪಿನಾಥ್, ಎಐಬಿಎಸ್‌ಪಿ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ, ಮಾಜಿ ಶಾಸಕ ಎಚ್.ಡಿ.ಬಸವರಾಜ್, ಆರ್‌ಪಿಐ(ಬಿ) ರಾಷ್ಟ್ರೀಯ ಅಧ್ಯಕ್ಷ ಎನ್.ಮೂರ್ತಿ, ರಾಜ್ಯಾಧ್ಯಕ್ಷ ಮೋಹನ್‌ರಾಜ್, ಕನ್ನಡ ಹೋರಾಟಗಾರ ಶಿವರಾಂ ಸೇರಿದಂತೆ ಹಲವು ಹೋರಾಟಗಾರರು ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.

ಜಿಲ್ಲಾ ಉಪಾಧ್ಯಕ್ಷ ಬಿ.ಆನಂದ್, ಮದ್ದೂರು ತಾಲೂಕು ಅಧ್ಯಕ್ಷ ಮುತ್ತುರಾಜ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net