ಸಕಲ ರೋಗ ನಿಯಂತ್ರಣ ಸಾಧ್ಯ

Untitled-2
ಜಿಗಣಿಯ ಎಸ್​ ವ್ಯಾಸ ಯೋಗ ಅನುಸಂಧಾನ ಕೇಂದ್ರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗ್ರಾಮಾಂತರ ಸಂಸದ ಡಾ.ಸಿ.ಎನ್​.ಮಂಜುನಾಥ್​, ಸಾವಿರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.
Published on

ಆನೇಕಲ್ : ಯೋಗವು ದೇಶದ ಸನಾತನ ಅಭ್ಯಾಸಗಳಲ್ಲಿ ಒಂದು ಎಂಬುವುದು ಹೆಮ್ಮೆಯ ವಿಷಯ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಸಂಸದ ಡಾ.ಸಿ.ಎನ್​ ಮಂಜುನಾಥ್​ ಹೇಳಿದರು.

ತಾಲೂಕಿನ ಜಿಗಣಿ ಎಸ್​ ವ್ಯಾಸ ಯೋಗ ಮನಸೊಂದಾನ ಕೇಂದ್ರದಲ್ಲಿ ಶನಿವಾರ ಆಯೋಜಿಸಿದ್ದ ಯೋಗ ಸಂಗಮ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯೋಗದಿಂದ ಯಾವುದೇ ರೋಗದಲ್ಲಿ ಬದಲಾವಣೆ ತರಲು ಸಾಧ್ಯ. ಪ್ರತಿದಿನ ಯೋಗಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಬೇಕು. ದೈಹಿಕ ಮತ್ತು ಮಾನಸಿಕ ಆರೋಗ್ಯದ ಬಲವರ್ಧನೆಗೆ ಯೋಗಭ್ಯಾಸ ಪರಿಣಾಮಕಾರಿಯಾಗಿದೆ ಎಂದರು.

ಭಾರತ ಅಲ್ಲದೆ ಪ್ರಪಂಚದಲ್ಲೂ ಯೋಗಕ್ಕೆ ಮಹತ್ವ ನೀಡಲಾಗುತ್ತಿದೆ. ವಿಶ್ವವೇ ಯೋಗದತ್ತ ವಾಲುತ್ತಿದೆ ಎಂದಾಗ ಯೋಗದ ಮಹತ್ವ ಎಷ್ಟಿದೆ ಎನ್ನುವುದನ್ನು ನಾವೆಲ್ಲರೂ ಅರಿತು ದೈನಂದಿನ ಬದುಕಿನಲ್ಲಿ ಯೋಗವನ್ನು ಮೈಗೂಡಿಸಿಕೊಳ್ಳೋಣ ಎಂದು ಹೇಳಿದರು.

ಕುಲಪತಿ ಕೆಎಸ್​ ಸುಬ್ರಹ್ಮಣ್ಯಂ ಮಾತನಾಡಿ, ಎಸ್​ ವ್ಯಾಸ ಯೋಗ ಯೂನಿವರ್ಸಿಟಿ ದೇಶದಲ್ಲಿ ಯೋಗದಿಂದಾಗುವ ಉಪಯೋಗ, ಬದಲಾವಣೆಗಳ ಬಗ್ಗೆ ಶಿಕ್ಷಣದ ಮೂಲಕ ತಿಳಿಸುವ ಕೆಲಸ ಮಾಡುತ್ತಿದೆ. ಉತ್ತಮ ಆರೋಗ್ಯ ಕಂಡುಕೊಳ್ಳುವ ನಿಟ್ಟಿನಲ್ಲಿ ಯೋಗದ ಮಹತ್ವ ಅರಿಯಬೇಕು. ಯೋಗ ನಮ್ಮ ದೇಹ ಹಾಗೂ ಆರೋಗ್ಯವನ್ನು ಸಂಪೂರ್ಣ ಸುಧಾರಿಸಿಕೊಳ್ಳಲು ಹಾಗೂ ಹೆಚ್ಚು ಪರಿಣಾಮಕಾರಿಯಾಗಲು ಸಾಧ್ಯವಾಗುತ್ತದೆ. ಒಂದು ದಿನದ ಕಾರ್ಯಕ್ರಮ ಯೋಗ ಆಗದೆ ಪ್ರತಿದಿನವೂ ಜೀವನದಲ್ಲಿ ಯೋಗ ಪ್ರಮುಖ ಪಾತ್ರ ವಹಿಸಬೇಕಾಗಿದೆ ಎಂದು ಹೇಳಿದರು. ರಿಜಿಸ್ಟ್ರಾರ್​ ಡಾ.ಎಸ್​.ಶಿವಶಂಕರ ಸಾಯಿ, ವಾಸುದೇವ ವೈದ್ಯ ಹಾಗೂ ಸಾವಿರಾರು ಯೋಗಪಟುಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net