ಸರ್ವರೋಗಕ್ಕೂ ಧ್ಯಾನ ಮದ್ದು

10 Hanumasagara 1
ಹನುಮಸಾಗರದ ಕರಿಸಿದ್ಧೇಶ್ವರ ಬಸವ ಮಂಟಪದಲ್ಲಿ ಹಮ್ಮಿಕೊಂಡ ಮಂಡಲ ಸಂಕಲ್ಪ ಧ್ಯಾನ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಧ್ಯಾನ ಮಾಡಿದರು.
Published on

ಹನುಮಸಾಗರ: ಪ್ರಶಾಂತವಾಗಿ ಕುಳಿತು ಉಸಿರಾಟದ ಮೇಲೆ ಗಮನ ಹರಿಸುವುದೇ ಧ್ಯಾನ ಎಂದು ಬೆಂಗಳೂರಿನ ಧ್ಯಾನ ಮಾಸ್ಟರ್ ಲಲಿತಾ ಪವಾರ ಹೇಳಿದರು.

ಪಟ್ಟಣದ ಶ್ರೀ ಕರಿಸಿದ್ಧೇಶ್ವರ ಬಸವಮಂಟಪದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮಂಡಲ ಸಂಕಲ್ಪ ಧ್ಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ನಿರಂತರ ಅನಾಪಾನಸತಿ ಧ್ಯಾನ ಮಾಡುವುದರಿಂದ ಎಲ್ಲವನ್ನು ಪಡೆಯಬಹುದು. ಧ್ಯಾನದಿಂದ ಮಾನಸಿಕ ನೆಮ್ಮದಿ, ಆರೋಗ್ಯ ವೃದ್ಧಿಯಾಗಲಿದೆ ಎಂದರು.

ಮಧುಮೇಹ, ರಕ್ತದೊತ್ತಡದಿಂದ ಬಳಲುತ್ತಿರುವವರು ನಿತ್ಯ ಧ್ಯಾನ ಮಾಡಿ. ಆರಾಮವಾಗಿ ಸುಖಾಸನದಲ್ಲಿ ಕುಳಿತು ಧ್ಯಾನ ಮಾಡಬಹುದು. ಇದರಿಂದ ಶರೀರದಲ್ಲಿ ಬ್ರಹ್ಮ ರಂದ್ರದಿಂದ ವಿಶ್ವಶಕ್ತಿ ಹರಿಯುತ್ತದೆ. ಗಾಢವಾದ ನಿದ್ರೆಯಲ್ಲಿ ದೇಹಕ್ಕೆ ಕಾಸ್ಮಿಕ್ ಎನರ್ಜಿ ಸಿಗುತ್ತದೆ. ಧ್ಯಾನದಿಂದ ಕ್ಯಾನ್ಸರ್‌ನಂತಹ ದೊಡ್ಡ ರೋಗಗಳಿಂದ ಗುಣಮುಖ ಹೊಂದಿದವರು ಇದ್ದಾರೆ.

ಮಾ.16ರ ಭಾನುವಾರ ಹನುಮಸಾಗರದಲ್ಲಿ ಧ್ಯಾನ ಮಹಾಯಜ್ಞ ಹಮ್ಮಿಕೊಂಡಿದ್ದು, ಎಲ್ಲರೂ ಸದುಪಯೋಗ ಪಡೆದುಕೊಳ್ಳಿ ಎಂದರು. ಹನುಮಸಾಗರದ ಧ್ಯಾನ ಮಾಸ್ಟರ್ ಏಕನಾಥ ಮೆದಿಕೇರಿ, ಎಎಸ್‌ಐ ಶಿವಕುಮಾರ ಹಿರೇಮಠ, ಪ್ರಮುಖರಾದ ಮಲ್ಲಯ್ಯ ಕೋಮಾರಿ, ಸತೀಶ ಜಮಖಂಡಿಕರ, ವಿವಿಧ ಸಂಘದ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net