

ಅಳವಂಡಿ: ಗಾಂಧೀಜಿ ಅವರ ಆದರ್ಶಗಳನ್ನು ಯುವ ಜನಾಂಗ ಅಳವಡಿಸಿಕೊಳ್ಳಬೇಕು. ಮಹಾತ್ಮಾ ಗಾಂಧೀಜಿ ಕೇವಲ ವ್ಯಕ್ತಿ ಅಲ್ಲ ಅವರು ದೇಶದ ಶಕ್ತಿಯಾಗಿದ್ದರು ಎಂದು ಉಪನ್ಯಾಸಕ ರೆಹಮಾನ್‌ಸಾಬ ತಿಳಿಸಿದರು.
ಗ್ರಾಮದ ಶ್ರೀ ಶಿವಮೂರ್ತಿಸ್ವಾಮಿ ಇನಾಮದಾರ ಕಟ್ಟಿಮನಿ ಹಿರೇಮಠ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗಾಂಧಿ ಭಾರತ ಕಾರ್ಯಕ್ರಮದಡಿ ನಾವು ಮನುಜರು ವಿಷಯ ಕುರಿತು ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಹಾತ್ಮಾ ಗಾಂಧಿ ಅವರು ವಿರೋಧಿಗಳು ಸಹ ಇಷ್ಟಪಡುವ ರೀತಿಯಲ್ಲಿ ಬದುಕಿದ್ದಾರೆ. ಗಾಂಧೀಜಿ ಅವರ ಆದರ್ಶಗಳು ಎಲ್ಲ ಕಾಲಕ್ಕೂ ಒಪ್ಪುತ್ತವೆ. ದೇಶಕ್ಕೆ ಸ್ವಾತಂತ್ರ ಕೊಡಿಸುವಲ್ಲಿ ಗಾಂಧಿಜೀ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದರು.
ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ನಾಗರಾಜ ಹಾವನಾಳ ಮಾತನಾಡಿ, ಮಾನವೀಯತೆ ಇಲ್ಲದೇ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯವಿಲ್ಲ. ಕಾರಣ ವಿದ್ಯಾರ್ಥಿಗಳು ಮಾನವೀಯ ಮೌಲ್ಯಗಳನ್ನು ಹಾಗೂ ಗಾಂಧೀಜಿ ಹಾಕಿಕೊಟ್ಟ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ಪ್ರಾಧ್ಯಾಪಕಿ ಡಾ.ಹಂಪಾದೇವಿ ಮಾತನಾಡಿ, ಗಾಂಧೀಜಿಯವರ ಕುರಿತು ಯುವ ಜನಾಂಗಕ್ಕೆ ಅರಿವು ಮೂಡಿಸುವ ಸಲುವಾಗಿ ಕಾಲೇಜು ಶಿಕ್ಷಣ ಇಲಾಖೆ ಈ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಪ್ರತಿಯೊಬ್ಬರೂ ಗಾಂಧೀಜಿ ಅವರ ತತ್ವಾದರ್ಶಗಳನ್ನು ಪಾಲಿಸಿ ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಜೀವನ ರೂಪಿಸಿಕೊಳ್ಳಬೇಕು ಎಂದರು.
ಪ್ರಾಚಾರ್ಯ ಜಗದೀಶ ಆಲದಕಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಧ್ಯಾಪಕರಾದ ಪ್ರವೀಣ, ಸಾಲಿಯಾಬೇಗಂ, ಡಾ.ಹಂಪಾದೇವಿ, ರೇಷ್ಮಾ ಉಪನ್ಯಾಸಕರಾದ ವಿಜಯಕುಮಾರ ಕುಲಕರ್ಣಿ, ಪ್ರದೀಪ ಪಲ್ಲೇದ, ವೆಂಕಟೇಶ, ಕೃಷ್ಣ, ಸಿದ್ದಪ್ಪ, ಇಬ್ರಾಹಿಂಸಾಬ್, ವಿನಾಯಕ, ಹಗಲೂರಪ್ಪ, ದೇವರಾಜ, ವೀರಯ್ಯ, ರಾಘವೇಂದ್ರ ಹಾಗೂ ವಿದ್ಯಾರ್ಥಿಗಳು ಇದ್ದರು.