ಬದುಕಿನಲ್ಲಿರಬೇಕು ಸಹಕಾರ ತತ್ವ - ಒಡಿಯೂರು ಶ್ರೀ ಆಶೀರ್ವಚನ - ಸಾಮೂಹಿಕ ಶ್ರೀ ಸತ್ಯದತ್ತ ವ್ರತ ಪೂಜೆಯ ಧಾರ್ಮಿಕ ಸಭೆ

PTR_26 FEB_1
Published on

ವಿಟ್ಲ: ಪ್ರಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರ ಕರ್ತವ್ಯವಿದೆ. ದೇಶದ ಉಳಿವಿಗೆ ಕೃಷಿಕರ ಪ್ರಾಮುಖ್ಯತೆ ಬಹಳಷ್ಟಿದ್ದು, ಬದುಕಿನಲ್ಲಿ ಸಹಕಾರ ತತ್ವವನ್ನು ಅಳವಡಿಸುವ ಜತೆಗೆ ಆತ್ಮವಿಶ್ವಾಸದಿಂದ ಮುನ್ನಡೆಯಬೇಕಾಗಿದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.

ಮಡಿಯಾಲ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಸಭಾಭವನದಲ್ಲಿ ಒಡಿಯೂರು ಶ್ರೀ ಚಾರಿಟೆಬಲ್ ಟ್ರಸ್ಟ್ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಂ ಸಂಚಾಲಿತ ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆ ಅಳಿಕೆ ಗ್ರಾಮ ಸಮಿತಿ ಹಾಗೂ ಘಟ ಸಮಿತಿಯ ೧೦ನೇ ವಾರ್ಷಿಕೋತ್ಸವ ಹಾಗೂ ಸಾಮೂಹಿಕ ಶ್ರೀ ಸತ್ಯದತ್ತ ವ್ರತ ಪೂಜೆಯ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.

ವಿಕಾಸ ವಾಹಿನಿಯ ಲಾಭಾಂಶದ ಸಾಂಕೇತಿಕ ವಿತರಣೆ ಮಾಡಲಾಯಿತು. ಚೆಂಡುಕಳ ಶ್ರೀಸ್ಕಂದ ಕುಣಿತ ಭಜನಾ ತಂಡದಿಂದ ಕುಣಿತ ಭಜನೆ ನಡೆಯಿತು. ಕುರುವಮೂಲೆ ಚಂದ್ರಶೇಖರ ಉಪಾಧ್ಯಾಯ ನೇತೃತ್ವದಲ್ಲಿ ಸಾಮೂಹಿಕ ಸತ್ಯದತ್ತ ವ್ರತ ಪೂಜೆ ನಡೆಯಿತು.

ಅಳಿಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಸ್. ಪದ್ಮನಾಭ ಪೂಜಾರಿ, ಎಂ.ಎಸ್. ರಾಮಯ್ಯ ದಂತ ವೈದ್ಯಕೀಯ ಕಾಲೇಜು ಅಸಿಸ್ಟೆಂಟ್ ಪ್ರೊಫೆಸರ್ ಡಾ. ಬಾಬಾ ಶಂಕರ್ ಆಳ್ವ ಮಿತ್ತಳಿಕೆ, ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ಅಧ್ಯಕ್ಷ ಸುರೇಶ್ ರೈ, ಅಳಿಕೆ ಶ್ರೀ ಸತ್ಯ ಸಾಯಿ ಲೋಕ ಸೇವಾ ಪದವಿ ಪೂರ್ವ ಕಾಲೇಜು ಉಪನ್ಯಾಸಕ ಧನಂಜಯ ಪಿ., ಮಾಣಿಲ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕಿ ಲತಾ ಪಿ. ಶೆಟ್ಟಿ ಅಳಿಕೆ, ಗ್ರಾಮ ಸಮಿತಿಯ ಅಧ್ಯಕ್ಷ ಕಾನ ಈಶ್ವರ ಭಟ್, ದೇವಸ್ಥಾನ ಅಭಿವೃದ್ಧಿ ಸಮಿತಿಯ ಕಾರ್ಯದರ್ಶಿ ಸುರೇಶ್ ಭಟ್ ಮಡಿಯಾಲ ಉಪಸ್ಥಿತರಿದ್ದರು.

ಘಟ ಸಮಿತಿ ಅಧ್ಯಕ್ಷ ಸದಾಶಿವ ಶೆಟ್ಟಿ ಅಳಿಕೆ ಸ್ವಾಗತಿಸಿದರು. ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಸಾರ್ವಜನಿಕ ಸಂಪರ್ಕ ಅಽಕಾರಿ ಮಾತೇಶ್ ಭಂಡಾರಿ ಪ್ರಸ್ತಾವನೆಗೈದರು. ಸೇವಾ ದೀಕ್ಷಿತೆ ಪ್ರತಿಮಾ ವರದಿ ವಾಚಿಸಿದರು. ಅಮಿತಾ, ಲೀಲಾವತಿ ಸನ್ಮಾನ ಪತ್ರ ಓದಿದರು. ಗ್ರಾಮ ಸಮಿತಿ ಕಾರ್ಯದರ್ಶಿ ಮಹೇಶ್ ದೂಜಮೂಲೆ ವಂದಿಸಿದರು. ಮೇಲ್ವಿಚಾರಕಿ ಲೀಲಾ ಕೆ. ಕಾರ್ಯಕ್ರಮ ನಿರೂಪಿಸಿದರು.

ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ

ಅಳಿಕೆ ಶ್ರೀ ಸತ್ಯ ಸಾಯಿ ಲೋಕ ಸೇವಾ ವಿದ್ಯಾಸಂಸ್ಥೆಯ ಯೋಗ ಶಿಕ್ಷಕ ಆನಂದ ಶೆಟ್ಟಿ, ಪ್ರೌಢಶಾಲೆಯ ಮುಖ್ಯ ಶಿಕ್ಷಕ ರಘು ಟಿ. ವೈ., ಶಂಕರನಾರಾಯಣ ದೇವಸ್ಥಾನದ ಅರ್ಚಕ ಬಾಲಕೃಷ್ಣ ಕಾರಂತ, ಹಿರಿಯ ದರ್ಜಿ ಬಾಬು ಮೂಲ್ಯ ಕಲ್ಲಜೇರ, ಸಮಾಜ ಸೇವಕ ಬಾಲಕೃಷ್ಣ ಪೂಜಾರಿ ಸಣ್ಣಗುತ್ತು, ಅಂಚೆ ನೌಕರ ಚಂದ್ರಶೇಖರ ಮಡಿಯಾಲ, ದೈವ ನರ್ತಕ ಬಾಬು ಕಲ್ಲೆಂಚಿಪಾದೆ, ಚುಟುಕು ಸಾಹಿತಿ ನಾರಾಯಣ ಕುಂಬ್ರ, ನಾಟಿ ಪ್ರಸೂತಿ ತಜ್ಞೆ ಚಿತ್ರಾ, ಪತ್ರಕರ್ತೆ ಹರ್ಷಿತಾ ವಿ. ಅವರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net