ವ್ಯಕ್ತಿತ್ವ ಅತ್ಯಂತ ಶ್ರೇಷ್ಠ ಸಂಪತ್ತು - ಇತಿಹಾಸ ಉಪನ್ಯಾಸಕ ಅಣ್ಣಪ್ಪ ಸಾಸ್ತಾನ ವಿಶ್ಲೇಷಣೆ

PTR_23 AUG_1
Published on

ವಿಟ್ಲ: ನಮ್ಮೊಳಗಿನ ವೈರಿಗಳನ್ನು ಸೋಲಿಸಲು ನಾವು ಸಾಮಾಜಿಕವಾಗಿ ಬೆಳೆಯುದರೊಂದಿಗೆ ಸಮಾಜಮುಖಿಯಾಗಿ ಬದುಕಬೇಕು. ಜಗತ್ತಿನಲ್ಲಿ ಅತ್ಯಂತ ಶ್ರೇಷ್ಠ ಸಂಪತ್ತು ಅಂದರೆ ನಮ್ಮ ವ್ಯಕ್ತಿತ್ವ, ಅದನ್ನು ಪರಿಪೂರ್ಣವಾಗಿಸುವಲ್ಲಿ ರಾಷ್ಟ್ರೀಯ ಸೇವಾ ಯೋಜನೆಯು ಕಾರ್ಯಪ್ರವೃತ್ತವಾಗಿದೆ ಎಂದು ವಿಠಲ ಪದವಿ ಪೂರ್ವ ಕಾಲೇಜಿನ ಇತಿಹಾಸ ಉಪನ್ಯಾಸಕ ಅಣ್ಣಪ್ಪ ಸಾಸ್ತಾನ ಹೇಳಿದರು.


ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯಡಿ ಆರಂಭಗೊಂಡ ಕಾರ್ಯಕ್ರಮದ ೨೦೨೪-೨೫ ನೇ ಶೈಕ್ಷಣಿಕ ವರ್ಷದ ಶ್ರೀ ಸತ್ಯ ಸಾಯಿ ಲೋಕ ಸೇವಾ ಪದವಿಪೂರ್ವ ಕಾಲೇಜಿನ ಎನ್.ಎಸ್.ಎಸ್ ಘಟಕ ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ ಶ್ರೀ ಸತ್ಯಸಾಯಿ ಲೋಕ ಸೇವಾ ಟ್ರಸ್ಟ್ ಅಳಿಕೆ ಮ್ಯಾನೇಜಿಂಗ್ ಟ್ರಸ್ಟಿ ಕೆ.ಎಸ್.ಕೃಷ್ಣ ಭಟ್ ಮಾತನಾಡಿ ಸೇವೆ ಎಂಬುದು ಒಂದು ಯಜ್ಞವಾಗಿದ್ದು, ಅದರಲ್ಲಿ ಅರ್ಪಣೆಗೊಳ್ಳುವ ಸಮಿತ್ತುಗಳು ನಾವಾಗಬೇಕು ಎಂದರು.
ವಿದ್ಯಾಸಂಸ್ಥೆಗಳ ಸಂಚಾಲಕ ಎಸ್. ಚಂದ್ರಶೇಖರ್ ಭಟ್ ಮಾತನಾಡಿ ಸಿಕ್ಕಿದ ಅವಕಾಶವನ್ನು ವಿದ್ಯಾರ್ಥಿಗಳು ಬಳಸಿಕೊಳ್ಳುವುದರ ಮೂಲಕ ಸರ್ವತೋಮುಖ ಅಭಿವೃದ್ಧಿಗೆ ಪ್ರಯತ್ನಿಸಬೇಕು ಎಂದರು.

ಅಳಿಕೆ ಶ್ರೀ ಸತ್ಯ ಸಾಯಿ ಲೋಕಸೇವಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಬಿ. ವೆಂಕಟಕೃಷ್ಣ ಶರ್ಮ ಸ್ವಾಗತಿಸಿ, ಪ್ರಾಸ್ತಾವನೆಗೈದರು. ಅಳಿಕೆ ರಾಷ್ಟ್ರೀಯ ಸೇವಾ ಯೋಜನೆ ಘಟಕ ಯೋಜನಾಽಕಾರಿ ಉದಯ ನಾಯ್ಕ್ ವಂದಿಸಿದರು. ಕನ್ನಡ ಉಪನ್ಯಾಸಕ ಧನಂಜಯ್ ಪಡಾರು ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net