ಮೌಲ್ಯಯುತ ಶಿಕ್ಷಣ ಇಂದಿನ ಅಗತ್ಯ ALIKE

ಸುಸಜ್ಜಿತ ಕಟ್ಟಡದ ಪ್ರವೇಶೋತ್ಸವ ಕಾರ್ಯಕ್ರಮದಲ್ಲಿ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಸಾಧ್ವಿ ಮಾತಾನಂದಮಯೀ ಆಶೀರ್ವಚನ ನೀಡಿದರು. ಚಂದ್ರಶೇಖರ ಭಟ್‌ ಎಸ್‌., ಸದಾಶಿವ ಶೆಟ್ಟಿ ಮಡಿಯಾಲ, ಜನಾರ್ದನ ನಾಯಕ್‌, ಉದನೇಶ್ವರ ಭಟ್‌ ಇತರರು ಇದ್ದರು.
ಸುಸಜ್ಜಿತ ಕಟ್ಟಡದ ಪ್ರವೇಶೋತ್ಸವ ಕಾರ್ಯಕ್ರಮದಲ್ಲಿ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಸಾಧ್ವಿ ಮಾತಾನಂದಮಯೀ ಆಶೀರ್ವಚನ ನೀಡಿದರು. ಚಂದ್ರಶೇಖರ ಭಟ್‌ ಎಸ್‌., ಸದಾಶಿವ ಶೆಟ್ಟಿ ಮಡಿಯಾಲ, ಜನಾರ್ದನ ನಾಯಕ್‌, ಉದನೇಶ್ವರ ಭಟ್‌ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಾಧ್ವಿ ಮಾತಾನಂದಮಯೀ ಆಶೀರ್ವಚನ
  • ವಾಣಿವಿಹಾರದಲ್ಲಿ ಸುಸಜ್ಜಿತ ಕಟ್ಟಡ ಲೋಕಾರ್ಪಣೆ
ವಿಟ್ಲ: ಶಾಲೆಗಳನ್ನು ದೇಗುಲದಂತೆ ಕಾಣುವ ಮನೋಭಾವ ಎಲ್ಲರಲ್ಲೂ ಮೂಡಬೇಕು. ಬಂಧನದಿಂದ ಮುಕ್ತಗೊಳಿಸುವ ಶಿಕ್ಷಣದ ಅವಶ್ಯಕತೆಯಿದ್ದು ಬದುಕಿಗೆ ಶಿಕ್ಷಣ ಜ್ಞಾನ ತೋರುವ ದೀಪವಾಗಬೇಕಾಗಿದೆ. ಮೌಲ್ಯಯುತ ಶಿಕ್ಷಣದ ಕೊರತೆಯಿಂದ ವಿದ್ಯಾವಂತರು ಸಮಾಜಕ್ಕೆ ಕಂಟಕವಾಗುತ್ತಿದ್ದಾರೆ. ಸಮಾಜದಲ್ಲಿ ಪ್ರಜ್ಞಾವಂತರಾಗುವ ಅಗತ್ಯವಿದೆ. ಲೌಕಿಕ ಹಾಗೂ ಧಾರ್ಮಿಕತೆ ಒಟ್ಟಾಗಿ ಸಾಗಿದಾಗ ಉತ್ತಮ ವ್ಯಕ್ತಿತ್ವ ನಿರ್ಮಾಣವಾಗುತ್ತದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಸಾಧ್ವಿ ಮಾತಾನಂದಮಯೀ ಹೇಳಿದರು.
ಅಳಿಕೆ ಶ್ರೀ ಸತ್ಯ ಸಾಯಿ ಲೋಕ ಸೇವಾ ಟ್ರಸ್ಟ್‌ನ ಪ್ರೌಢಶಾಲೆಯ ವಾಣಿವಿಹಾರದ ಬಾಲಕಿಯರ ವಿಭಾಗ ನೂತನ ತರಗತಿ ಕೊಠಡಿಗಳ ಸುಸಜ್ಜಿತ ಕಟ್ಟಡದ ಪ್ರವೇಶೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಮಂಜಳಗಿರಿ ಉದಯ ಭಟ್‌ ಪೌರೋಹಿತ್ಯದಲ್ಲಿ ಗಣಪತಿ ಹವನ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಸತ್ಯ ಸಾಯಿ ಲೋಕ ಸೇವಾ ಟ್ರಸ್ಟ್‌ನ ಮ್ಯಾನೇಜಿಂಗ್‌ ಟ್ರಸ್ಟಿ ಕೆ.ಎಸ್‌.ಕೃಷ್ಣ ಭಟ್‌ ವಹಿಸಿದ್ದರು.
ಶ್ರೀ ಸತ್ಯ ಸಾಯಿ ಲೋಕ ಸೇವಾ ಟ್ರಸ್ಟ್‌ನ ಕಾರ್ಯದರ್ಶಿ ಚಂದ್ರಶೇಖರ ಭಟ್‌ ಎಸ್‌., ಒಡಿಯೂರು ಗ್ರಾಮ ವಿಕಾಸ ಯೋಜನೆಯ ಅಳಿಕೆ ಘಟ ಸಮಿತಿಯ ಅಧ್ಯಕ್ಷ ಸದಾಶಿವ ಶೆಟ್ಟಿ ಮಡಿಯಾಲ, ಸಂಸ್ಥೆಯ ಆಡಳಿತಾಧಿಕಾರಿ ಜನಾರ್ದನ ನಾಯಕ್‌, ಬಾಲಕುಟೀರ ನಿಲಯಪಾಲಕ ಉದನೇಶ್ವರ ಭಟ್‌ ಉಪಸ್ಥಿತರಿದ್ದರು.
ಪ್ರೌಢಶಾಲೆ ಮುಖ್ಯ ಶಿಕ್ಷಕ ರಘು ಟಿ.ವೈ. ಸ್ವಾಗತಿಸಿದರು. ಶಿಕ್ಷಕಿ ಸೌಮ್ಯಾ ಕೆ. ವಂದಿಸಿದರು. ಶಿಕ್ಷಕ ಅಶೋಕ್‌ ಕುಮಾರ್‌ ಎ. ಕಾರ್ಯಕ್ರಮ ನಿರೂಪಿಸಿದರು.
"

ನೈತಿಕತೆ ಇದ್ದಾಗ ಉನ್ನತದ ಕಡೆಗೆ ಸಾಗಬಹುದು. ಶ್ರೇಷ್ಠತೆಯನ್ನು ಕಂಡುಕೊಂಡಾಗ ಸುಲಭವಾಗಿ ಗುರಿಯ ಕಡೆಗೆ ಸಾಗಬಹುದು. ಮಕ್ಕಳ ಪ್ರತಿಭೆಯನ್ನು ಹೊರ ತರುವ ಕೆಲಸ ಗುರುಗಳಿಂದ ನಡೆಯಬೇಕು. ವಿದ್ಯಾರ್ಥಿ ಜೀವನದಲ್ಲಿ ಸಮಯಕ್ಕೆ ಮಹತ್ವ ನೀಡಿ ವಿದ್ಯೆಯನ್ನು ತಪಸ್ಸಿನಂತೆ ಮಾಡಬೇಕು.

— ಸಾಧ್ವಿ ಮಾತಾನಂದಮಯೀ, ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನ


"

ದೇವರ ಸ್ವರೂಪದಲ್ಲಿ ಪ್ರತಿಯೊಬ್ಬರನ್ನೂ ಕಾಣುವುದು ಶ್ರೇಷ್ಠ ಸಂಸ್ಕೃತಿಯಾಗಿದೆ. ಹೆಣ್ಣುಮಕ್ಕಳಿಗೆ ವಿದ್ಯಾಭಾಸ ನೀಡುವುದರಿಂದ ಕುಟುಂಬಕ್ಕೆ ಶಿಕ್ಷಣ ನೀಡಿದಂತಾಗುತ್ತದೆ. ಪ್ರತಿಯೊಬ್ಬರೂ ಸಮಾಜಕ್ಕೆ ಆದರ್ಶವಾಗಬೇಕು. ಭ್ರಷ್ಟಾಚಾರಕ್ಕೆ ಮುಕ್ತಿ ನೀಡುವ ಕಾರ್ಯ ಯುವ ಶಕ್ತಿಯಿಂದ ನಡೆಯಬೇಕು.

— ಚಂದ್ರಶೇಖರ ಭಟ್‌, ಅಳಿಕೆ ಸತ್ಯ ಸಾಯಿ ವಿದ್ಯಾಸಂಸ್ಥೆ ಸಂಚಾಲಕ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net