ಕ್ಷಯ ಮುಕ್ತ ಗ್ರಾಮಕ್ಕೆ ಸಹಕಾರ ಅಗತ್ಯ - ಅಳಿಕೆ ಗ್ರಾಮ ಪಂಚಾಯಿತಿ ಗ್ರಾಮ ಸಭೆಯಲ್ಲಿ ಅಽಕಾರಿಗಳ ಹೇಳಿಕೆ

PTR_10 MAR_1
Published on

ವಿಟ್ಲ: ಅಳಿಕೆ ಗ್ರಾಮ ಪಂಚಾಯಿತಿ ೨೦೨೪-೨೫ನೇ ಸಾಲಿನ ದ್ವಿತೀಯ ಸುತ್ತಿನ ಗ್ರಾಮ ಸಭೆ ಪಂಚಾಯಿತಿ ಅಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು ಅಧ್ಯಕ್ಷತೆಯಲ್ಲಿ ನಡೆಯಿತು.

ಹಳೆಯದಾದ ವಿದ್ಯುತ್ ತಂತಿಗಳನ್ನು ಪರಿವರ್ತಿಸುವ ಕಾರ್ಯ ಮಾಡಬೇಕು. ಪ್ರಾಣಿಗಳಿಂದ ಕೃಷಿಗೆ ಆಗುತ್ತಿರುವ ಹಾವಳಿಯನ್ನು ತಪ್ಪಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಬೇಡಿಕೆಯಿಟ್ಟರು. ಗ್ರಾಮವನ್ನು ಕ್ಷಯ ಮುಕ್ತ ಮಾಡುವ ನಿಟ್ಟಿನಲ್ಲಿ ಪ್ರತಿಯೊಬ್ಬರ ಸಹಕಾರ ಬೇಕಾಗಿದೆ. ಬಿಸಿ ಗಾಳಿಯ ಸಮಯದಲ್ಲಿ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂದು ಅಽಕಾರಿಗಳು ಎಚ್ಚರಿಸಿದರು.

ಎಲ್ಲೆಂದರಲ್ಲಿ ತ್ಯಾಜ್ಯ ನಿರ್ವಹಣೆಯನ್ನು ತಪ್ಪಿಸುವ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ ಮನೆ ಮನೆಯಿಂದ ಕಸ ಸಂಗ್ರಹಣೆ ಕಾರ್ಯಕ್ಕೆ ಮುಂದಾಗಿದೆ. ಗ್ರಾಮದ ಪ್ರತಿಯೊಬ್ಬರು ಕಸವನ್ನು ಸಂಗ್ರಹಿಸಿ ಸರಿಯಾದ ರೀತಿಯಲ್ಲಿ ಜೋಡಿಸಿ ನೀಡುವ ಕಾರ್ಯ ಮಾಡಬೇಕು. ಪ್ಯಾಡ್ ಪ್ಯಾಂಪರ್ಸ್‌ಗಳನ್ನು ತ್ಯಾಜ್ಯದ ಜತೆಗೆ ನೀಡುವವರು ಸರಿಯಾಗಿ ಒಣಗಿಸಿ ನೀಡುವ ಕಾರ್ಯ ಮಾಡಬೇಕೆಂದು ಪಂಚಾಯಿತಿಯಿಂದ ಮನವಿ ಮಾಡಲಾಯಿತು.

ಆರೋಗ್ಯ ಇಲಾಖೆಯಿಂದ ಪ್ರಾರ್ಥಮಿಕ ಆರೋಗ್ಯ ಕೇಂದ್ರದ ಡಾ.ಜಯಪ್ರಕಾಶ್, ಅರಣ್ಯ ಇಲಾಖೆಯ ಉಪ ವಲಯಾರಾಣ್ಯಾಽಕಾರಿ ವೀರಣ್ಣ, ಶಿಕ್ಷಣ ಇಲಾಖೆಯಿಂದ ಸಿಆರ್‌ಪಿ ಚಂದ್ರಶೇಖರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ರೋಹಿಣಿ, ಮೆಸ್ಕಾಂ ಶಾಖಾಽಕಾರಿ ಆನಂದ, ಕಂದಾಯ ಇಲಾಖೆಯ ಗ್ರಾಮ ಕರಣಿಕ ಸತೀಶ್ ಸುವರ್ಣ ಮತ್ತಿತರರು ಭಾಗವಹಿಸಿ ಮಾಹಿತಿ ನೀಡಿದರು. ನೋಡಲ್ ಅಽಕಾರಿಯಾಗಿ ಅಕ್ಷರದಾಸೋಹದ ನೋಣಯ್ಯ ನಾಯ್ಕ ಭಾಗವಹಿಸಿದರು.

ಉಪಾಧ್ಯಕ್ಷೆ ಸರೋಜಿನಿ, ಸದಸ್ಯರಾದ ಭಾಗೀರಥಿ ಎಸ್., ಗಿರಿಜ, ಬಬಿತಾ, ಶಶಿಕಲಾ, ಸುಕುಮಾರ, ಕೆ.ಈಶ್ವರ ಭಟ್, ರವೀಶ ಕೆ., ಜಗದೀಶ್ ಶೆಟ್ಟಿ, ಸೀತಾರಾಮ ಶೆಟ್ಟಿ, ಸೆಲ್ವಿನ್ ಡಿಸೋಜ, ಸರಸ್ವತಿ ಕೆ., ಸದಾಶಿವ ಶೆಟ್ಟಿ ಮಡಿಯಾಲ, ಶಾಂಭವಿ ಎಂ.ಮತ್ತಿತರರು ಭಾಗವಹಿಸಿದರು. ಅಭಿವೃದ್ಧಿ ಅಽಕಾರಿ ಧನಂಜಯ ವರದಿ ವಾಚಿಸಿದರು. ಸಿಬ್ಬಂದಿ ಲಿಂಗಪ್ಪ ಪ್ರಭು ಆಡಳಿತ ವರದಿ ಓದಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net