ಸತ್ಯ ಸಾಯಿ ವಿದ್ಯಾರ್ಥಿಗಳ ಪ್ರತಿ ಹೆಜ್ಜೆಯಲ್ಲಿ ಎಚ್ಚರ ಇರಬೇಕು - ಚಂದ್ರಶೇಖರ ಭಟ್

20231210_110652
Published on

ವಿಟ್ಲ: ಸತ್ಯ ಸಾಯಿ ಬಾಬಾ ಅವರು ನಮಗೆ ಎಲ್ಲವನ್ನೂ ನೀಡಿದ್ದು, ಅದನ್ನು ಸದುಪಯೋಗ ಪಡಿಸಿಕೊಳ್ಳುವ ಕಾರ್ಯ ಮಾಡಬೇಕು. ಸತ್ಯ ಸಾಯಿ ವಿದ್ಯಾರ್ಥಿಗಳು ತಪ್ಪು ಮಾಡಿದರೆ ಸಮಾಜದಲ್ಲಿ ತಕ್ಷಣ ಗುರುತಿಸಲ್ಪಡುವ ಕಾರಣ, ಈ ಬಗ್ಗೆ ಪ್ರತಿಯೊಂದು ಹೆಜ್ಜೆ ಇಡುವಾಗಲೂ ಎಚ್ಚರ ವಹಿಸಬೇಕಾಗುತ್ತದೆ ಎಂದು ಅಳಿಕೆ ಶ್ರೀ ಸತ್ಯ ಸಾಯಿ ಲೋಕ ಸೇವಾ ಟ್ರಸ್ಟ್ ಕಾರ್ಯದರ್ಶಿ ಚಂದ್ರಶೇಖರ ಭಟ್ ಹೇಳಿದರು.

ಅವರು ಭಾನುವಾರ ಅಳಿಕೆ ಶ್ರೀ ಸತ್ಯ ಸಾಯಿ ಪ್ರಾರ್ಥನಾ ಮಂದಿರದಲ್ಲಿ ನಡೆದ ಶ್ರೀ ಸತ್ಯ ಸಾಯಿ ಲೋಕ ಸೇವಾ ವಿದ್ಯಾ ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳ ಸಮಾವೇಶದಲ್ಲಿ ಮಾತನಾಡಿದರು.

ಬೆಂಗಳೂರಿನ ವಿಕ್ಟೋರಿ ಆಸ್ಪತ್ರೆಯ ನಿರ್ದೇಶಕ ಡಾ. ನಾಗೇಶ್ ಅವರು ಯು. ಗಂಗಾಧರ ಭಟ್ ಅವರ ನೆನಪಿನ ಉಪನ್ಯಾಸ ನೀಡಿದರು. ಶ್ರಮ ಜೀವಿಗಳಾದ ದೇವಕಿ ಮೆಣಸಿನಗಂಡಿ, ಸೇಸಮ್ಮ ಮಡಿಯಾಲ, ದೇವಕಿ ಸಿಂಹಮೂಲೆ, ಸುಂದರಿ ಸಿಂಹಮೂಲೆ, ರಾಮ ಕುಲಾಲ್ ಅಳಿಕೆ ಅವರನ್ನು ಸನ್ಮಾನಿಸಲಾಯಿತು.

ದೇರಳಕಟ್ಟೆ ಕೆ. ಎಸ್. ಹೆಗ್ಡೆ ಆಸ್ಪತ್ರೆಯ ಮೂಳೆ ತಜ್ಞ ಡಾ. ವಿಕ್ರಮ ಶೆಟ್ಟಿ ನೂತನ ಬಾಲಕಿಯರ ಪದವಿ ಪೂರ್ವ ಕಾಲೇಜು ಕಾಮಗಾರಿಯ ಬಗ್ಗೆ ಮಾಹಿತಿ ನೀಡಿದರು. ಸುಮಾರು ೬.೫ಕೋಟಿ ವೆಚ್ಚದಲ್ಲಿ ನಿರ್ಮಣವಾಗುವ ಕಟ್ಟಡಕ್ಕೆ ೧.೩೦ಕೋಟಿ ಯನ್ನು ವಿವಿಧ ವರ್ಷದಲ್ಲಿ ಶಿಕ್ಷಣ ಪೂರೈಸಿದ ಹಳೆ ವಿದ್ಯಾರ್ಥಿಗಳು ನೀಡುವ ಭರವಸೆಯನ್ನು ನೀಡಿದರು.

ಅಳಿಕೆ ಶ್ರೀ ಸತ್ಯ ಸಾಯಿ ಲೋಕ ಸೇವಾ ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟಿ ಕೆ. ಎಸ್. ಕೃಷ್ಣ ಭಟ್, ಸತ್ಯ ಪ್ರಸಾದ್, ಸಾಯಿ ಪ್ರಸನ್ನ, ಡಾ. ಸಾಯಿ ಗೀತಾ, ಅಕ್ಕಾರಿ ಬಿ. ಶೆಟ್ಟಿ, ಬಾಳಪ್ಪ ಶೆಟ್ಟಿ, ಡಾ.ನರೇಂದ್ರ ರೆಡ್ಡಿ ವಿ., ನಿವೃತ್ತ ಶಿಕ್ಷಕ ಮಧುಸೂದನ ಭಟ್ ಮತ್ತಿತರರು ಉಪಸ್ಥಿತರಿದ್ದರು.

ಹಿರಿಯ ವಿದ್ಯಾರ್ಥಿಗಳಾದ ಗೌರವ ಶೆಟ್ಟಿ ಸ್ವಾಗತಿಸಿದರು. ಡಾ. ನರೇಂದ್ರ ರೆಡ್ಡಿ ವಿ. ವರದಿ ವಾಚಿಸಿದರು. ಯಾದವ ಎನ್. ಸನ್ಮಾನಿತರ ಪರಿಚಯ ನೀಡಿದರು. ಮದ್ವೇಶ್ ಟಿ.ಡಿ. ವಂದಿಸಿದರು. ಡಾ. ಕಿಶನ್ ಭಾಗವತ್, ಮಂಜುನಾಥ ಬಿ. ಯು. ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net