ನೈಸರ್ಗಿಕ ಕೃಷಿ ಅಭಿಯಾನ ತರಬೇತಿ

PTR_14 OCT_5
Published on

ವಿಟ್ಲ: ಬಂಟ್ವಾಳ ತಾಲೂಕು ಕೃಷಿ ಇಲಾಖೆ ವತಿಯಿಂದ ಅಳಿಕೆ ಗುಚ್ಛದ ತರಬೇತಿ ಕಾರ್ಯಕ್ರಮದಡಿ ನೈಸರ್ಗಿಕ ಕೃಷಿ ಅಭಿಯಾನ ತರಬೇತಿ ಕಾರ್ಯಕ್ರಮ ಅಳಿಕೆ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ಮಂಗಳವಾರ ನಡೆಯಿತು.

ಅಳಿಕೆ ಗ್ರಾಮ ಪಂಚಾಯಿತಿ ಸದಸ್ಯ ಸದಾಶಿವ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ವಿಟ್ಲ ಕೃಷಿ ಇಲಾಖೆ ಕೃಷಿ ಅಧಿಕಾರಿ ನಂದನ್ ಶೆಣೈ ಇಲಾಖಾ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ಸಂಪನ್ಮೂಲ ವ್ಯಕ್ತಿ ಸುನೀತಾ ಉದಯ ಶೆಟ್ಟಿ ಬೊಂಡಾಲ, ನೈಸರ್ಗಿಕ ಕೃಷಿ ವಿಧಾನಗಳಾದ ಜೀವಾಮೃತ, ಬೀಜಾಮೃತ, ಘನ ಜೀವಾಮೃತ, ನೀಮಾಸ್ತ್ರ ಬಗ್ಗೆ ಮಾಹಿತಿ ನೀಡಿದರು. ಅಳಿಕೆ ಪಿಡಿಒ ಉದಯ ಸಹಜ ಕೃಷಿ ಮಹತ್ವ ಕುರಿತು ಮಾಹಿತಿ ನೀಡಿದರು. ಬಿಆರ್‌ಸಿ ವಿನುತ್ ನಾಯಕ್, ವೀರಕಂಬ ಸಿಆರ್‌ಪಿ ನಮಿತಾ, ಎಲ್‌ಸಿಆರ್‌ಪಿ ರೇವತಿ ಉಪಸ್ಥಿತರಿದ್ದರು.

ಅಳಿಕೆ ಗ್ರಾಪಂ ಸಿಆರ್‌ಪಿ ಸವಿತಾ ಡಿಸೋಜ ಸ್ವಾಗತಿಸಿದರು. ಸಿಆರ್‌ಪಿ ಗಾಯತ್ರಿ ವಂದಿಸಿದರು. ವಿಟ್ಲ ಹೋಬಳಿಯ ಆತ್ಮ ಯೋಜನೆ ತಾಂತ್ರಿಕ ಸಹಾಯಕ ವಿರೂಪಾಕ್ಷ ಹಡಪದ್ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net