ವಕ್ಫ್ ಬೋರ್ಡ್ ಅಧ್ಯಕ್ಷರಾಗಿ ಅಲಿಬಾಬಾ ಆಯ್ಕೆ, ಹಾಸೀಂ ಪೀರ್ ದರ್ಗಾ ಬಳಿ ಸಂಭ್ರಮಾಚರಣೆ

WOKF BOARD CHAIRMENT NOMINATED
ವಿಜಯಪುರ ನಗರದ ಹಾಸೀಂ ಪೀರ್ ದರ್ಗಾ ಬಳಿ ಮೈನಾರಿಟಿ ಮುಸ್ಲಿಂ ಡೆವೆಲಪ್‌ಮೆಂಟ್ ಕಮಿಟಿಯಿಂದ ಸಂಭ್ರಮ ಆಚರಿಸಲಾಯಿತು. ಮುಖಂಡರಾದ ಜೈನುಲ್ ಹಾಬಿದೀನ್, ಎಲ್.ಎಲ್. ಉಸ್ತಾದ್, ಬಿ.ಎಚ್. ಮಹಾಬರಿ, ಸಜ್ಜಾದೆಪಿರಾ ಮುಶ್ರೀಫ್ ಮತ್ತಿತರರಿದ್ದಾರೆ.
Published on

ವಿಜಯಪುರ: ರಾಜ್ಯ ವಕ್ಫ್ ಬೋರ್ಡ್‌ನ ನೂತನ ಅಧ್ಯಕ್ಷರಾಗಿ ಅಲಿ ಅಲ್ ಹುಸೇನಿ ಊರ್ಫ್ ಅಲಿಬಾಬಾ ಆಯ್ಕೆಯಾದ ಹಿನ್ನೆಲೆ ನಗರದ ಹಾಸೀಂ ಪೀರ್ ದರ್ಗಾ ಬಳಿ ಮೈನಾರಿಟಿ ಮುಸ್ಲಿಂ ಡೆವೆಲಪ್‌ಮೆಂಟ್ ಕಮಿಟಿಯಿಂದ ಶನಿವಾರ ಸಂಭ್ರಮ ಆಚರಿಸಲಾಯಿತು.

ಅಲಿಬಾಬಾ ಪರ ಜಯಘೋಷಗಳನ್ನು ಕೂಗಿ, ಪಟಾಕಿ ಸಿಡಿಸಿ ಮುಖಂಡರು ಸಂತಸ ವ್ಯಕ್ತಪಡಿಸಿದರು. ಮುಸ್ಲಿಂ ಸಮಾಜದ ವಿವಿಧ ಮುಖಂಡರು ಈ ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ್ದರು. ಹಾಸೀಂಪಿರ್ ದರ್ಗಾಗೆ ಹೂವಿನ ಹೊದಿಕೆ ಹಾಕಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ನೂತನ ಅಧ್ಯಕ್ಷ ಅಲಿಬಾಬಾ ಅವರು ವಕ್ಫ್ ಬೋರ್ಡ್‌ನ್ನು ಉತ್ತಮವಾಗಿ ಮುನ್ನಡೆಸಿಕೊಂಡು ಹೋಗಲಿ ಎಂದರಲ್ಲದೇ ಈ ಹಿಂದೆ ವಕ್ಫ್ ಬೋರ್ಡ್‌ನಲ್ಲಿ ನಡೆದ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಮುಖಂಡರಾದ ಜೈನುಲ್ ಹಾಬಿದೀನ್, ಎಂಎಂಡಿಸಿ ಮುಖಂಡ ಎಲ್.ಎಲ್. ಉಸ್ತಾದ್, ಬಿ.ಎಚ್. ಮಹಾಬರಿ, ಸಜ್ಜಾದೆಪಿರಾ ಮುಶ್ರೀಫ್, ಇರ್ಫಾನ್ ಶೇಖ, ಹಾಫೀಜ್ ಸಿದ್ದಿಕಿ, ಇಸಾಕಾದ್ರಿ ಮುಶ್ರೀಫ್, ಅನಿಸ ಶೇಖ, ಅಲ್ತಾಫ್ ಲಕ್ಕುಂಡಿ, ಅಯಾಜ ರೊಜೇವಾಲೆ, ಇಮ್ರಾನ್ ಜಹಾಗೀರದಾರ, ಹಿದಾಯತ್ ಮಾಶಾಳಕರ, ಅಯಾನ್ ಬಾಂಗಿ, ಇಖಲಾಸ್ ಸುನೇವಾಲೆ, ನಿಜಾಮ್ ಹರಿಯಾಲ್, ಖ್ವಾಜಾಅಮಿನ ಮಮದಾಪೂರ, ರಫೀಕ ಸೌದಾಗರ್, ಮಸ್ತಾನ್ ಗೌಂಡಿ, ಹನ್ನಾನ ಶೇಖ್, ಇಸಾಕ್ ಲಕ್ಕುಂಡಿ, ಸಾದಿಕ್ ಇಮಾರತವಾಲೆ, ಶಬ್ಬೀರ್ ಜಹಾಗಿರದಾರ, ರಫೀಕ್‌ಫನಿಬಂದ್, ಮುಸಾ ಲಕ್ಕುಂಡಿ, ಸದ್ದಾಂ ಲಕ್ಕುಂಡಿ, ರಫೀಕ್ ಗೌರ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net