ದುರ್ಗದಲ್ಲಿ ಪಿಎಫ್‌ಐ ಕಾರ‌್ಯಕರ್ತನ ಬಂಧನ, ನಸುಕಿನಲ್ಲಿ ನಡೆದ ಪೊಲೀಸರ ಕಾರ‌್ಯಾಚರಣೆ

ca3ba7b9-7f76-417f-a98e-2b82350bda6dddd
Published on

ಚಿತ್ರದುರ್ಗ: ನಗರದಲ್ಲಿ ಮಂಗಳವಾರ ಕೋಟೆ ಪೊಲೀಸರು ಪಿಎಫ್‌ಐ ಕಾರ‌್ಯಕರ್ತ ಆಫನ್‌ಅಲಿ(38)ನನ್ನು ಬಂಧಿಸಿದ್ದಾರೆ. ನಗರದ ಅಲಿ ಮೊಹಲ್ಲಾ ನಿವಾಸಿ ಆಫನ್ ಅಲಿ ಮನೆಯ ಬೆಳಗಿನ ಜಾವ ದಾಳಿ ನಡೆಸಿದ ಪೊಲೀಸರು,ಅಲಿಯನ್ನು ವಶಕ್ಕೆ ಪಡೆದು,ಸಿಆರ್‌ಪಿಸಿ 107,151ರಡಿ ಪ್ರಕರಣದಡಿ ತಾಲೂಕು ಮ್ಯಾಜಿಸ್ಟ್ರೇಟ್ ಎದುರು ಹಾಜರುಪಡಿಸಿದ್ದಾರೆ.

ತಹಸೀಲ್ದಾರ್ ಸತ್ಯನಾರಾಯಣ ಅವರು ಅಲಿಗೆ ಅಕ್ಟೋಬರ್ 6 ವರೆಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ. ಕೋಟೆ ಪಿಎಸ್ಐ ರುಕ್ಕಮ್ಮ ಮತ್ತವರ ಸಿಬ್ಬಂದಿ ಈ ಕಾರ‌್ಯಾಚರಣೆಯಲ್ಲಿ ಭಾಗವಹಿಸಿದ್ದರು ಎಂದು ಎಸ್ಪಿ ಕೆ.ಪರಶುರಾಮ್ ತಿಳಿಸಿದ್ದಾರೆ.

ಈಚೆಗೆ ದೇಶ,ರಾಜ್ಯದ ವಿವಿಧೆಡೆ ಪೊಲೀಸರು ನಡೆಸಿರುವ ಪಿಎಫ್‌ಐ ಕಾರ‌್ಯಕರ್ತರ ಬಂಧನದ ಕಾರ‌್ಯಾ ಚರಣೆ ಕೋಟೆ ನಗರಿ ಚಿತ್ರದುರ್ಗಕ್ಕೂ ವ್ಯಾಪಿಸಿದಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net