ಅಲೆವೂರು ಗ್ರಾಪಂ ಶೇ.10 ತೆರಿಗೆ ಕಡಿತ

tax
Published on

ಉಡುಪಿ: ಕೋವಿಡ್ ಲಾಕ್‌ಡೌನ್‌ನಿಂದ ಜನ ತೊಂದರೆಗೊಳಗಾಗಿರುವುದನ್ನು ಮನಗಂಡು ಅಲೆವೂರು ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಅಲೆವೂರು ಹಾಗೂ ಕೊರಂಗ್ರಪಾಡಿ ಗ್ರಾಮದಲ್ಲಿ ಮನೆ ತೆರಿಗೆ, ವಾಣಿಜ್ಯ ಕಟ್ಟಡ ತೆರಿಗೆ ಮತ್ತು ಉದ್ಯಮ ಪರವಾನಗಿ ಶುಲ್ಕವನ್ನು ಶೇ. 10 ಕಡಿತಗೊಳಿಸಿ ನಿರ್ಣಯ ಕೈಗೊಳ್ಳಲಾಗಿದೆ.

ಮನೆ ಹಾಗೂ ಕಟ್ಟಡ ತೆರಿಗೆಯಿಂದ ಪಂಚಾಯಿತಿಗೆ ಅಂದಾಜು 30 ಲಕ್ಷ ರೂ. ಆದಾಯವಿದ್ದು, ಉದ್ಯಮ ಪರವಾನಗಿ ಶುಲ್ಕವಾಗಿ ಸುಮಾರು 150 ಉದ್ಯಮಿಗಳಿಂದ ಅಂದಾಜು 1 ಲಕ್ಷ ರೂಪಾಯಿಯಷ್ಟು ಶುಲ್ಕ ಸಂಗ್ರಹವಾಗುತ್ತಿತ್ತು. ಇದೀಗ ಶೇ. 10ರಷ್ಟು ತೆರಿಗೆ ಹಾಗೂ ಶುಲ್ಕ ವಿನಾಯಿತಿ ಪ್ರಕಟಿಸಿರುವುದರಿಂದ ಪಂಚಾಯಿತಿ ಆದಾಯದಲ್ಲಿ ಅಂದಾಜು 3 ಲಕ್ಷ ರೂ. ಕಡಿತವಾಗಲಿದೆ.

ಕರೊನಾ ಸಾಂಕ್ರಾಮಿಕ ರೋಗದಿಂದ ಉದ್ಯೋಗ ನಷ್ಟ ಹಾಗೂ ವ್ಯಾಪಾರದಲ್ಲಿ ನಷ್ಟ ಅನುಭವಿಸಿರುವುದರಿಂದ ಊರಿನ ಜನ ಸಂಕಷ್ಟದಲ್ಲಿದ್ದಾರೆ. ತೆರಿಗೆ ಹಾಗೂ ಶುಲ್ಕದ ಮೊತ್ತದಲ್ಲಿ ಶೇ. 10 ಕಡಿತಗೊಳಿಸಿರುವುದು ರಾಜ್ಯದಲ್ಲಿಯೇ ಪ್ರಥಮ. ಬೇರೆ ಪಂಚಾಯತಿಗಳೂ ಈ ಮಾದರಿ ಅನುಸರಿಸಿದರೆ ಜನರಿಗೆ ಸಣ್ಣ ಮಟ್ಟಿನ ಪರಿಹಾರ ಸಿಗಬಹುದು ಎಂದು ಅಲೆವೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪುಷ್ಪಾ ಅಂಚನ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net