ಬಿರುಗಾಳಿ ಸಹಿತ ಜೋರು ಮಳೆ: ಬಿಳಿದೇಗಲು ಗ್ರಾಮದಲ್ಲಿ ಆಲೆಮನೆ ನಾಶ

Alemane destroyed due to rain mandya
Published on

ಮಂಡ್ಯ: ಸೋಮವಾರ ರಾತ್ರಿ ಸುರಿದ ಬಿರುಗಾಳಿ ಸಹಿತ ಜೋರು ಮಳೆಯಿಂದಾಗಿ ತಾಲೂಕಿನ ಬಿಳಿದೇಗಲು ಗ್ರಾಮದಲ್ಲಿ ಅವಾಂತರ ಸೃಷ್ಟಿಸಿದ್ದು, ಆಲೆಮನೆಯ ಮೇಲ್ಛಾವಣಿ ಮುರಿದು ಹಾಗೂ ಬೆಲ್ಲ ನೀರು ಪಾಲಾಗಿ ಲಕ್ಷಾಂತರ ರೂ ನಷ್ಟವಾಗಿದೆ.

ಗ್ರಾಮದ ವೆಂಕಟೇಶ್ ಎಂಬುವರಿಗೆ ಸೇರಿದ ಆಲೆಮನೆಯಲ್ಲಿ ಮಳೆ ನೀರಿನಿಂದಾಗಿ ಸಮಸ್ಯೆಯಾಗಿದೆ. ಏಕಾಏಕಿ ಸುರಿದ ಬಿರುಗಾಳಿ ಸಹಿತ ಮಹಿಳೆಯಿಂದಾಗಿ ಮೇಲ್ಛಾವಣಿ ಮುರಿದುಬಿದ್ದಿದೆ. ಸುಮಾರು 6 ರಿಂದ 7 ಲಕ್ಷ ರೂ ಮೌಲ್ಯದ ಸಾವಯವ ಬೆಲ್ಲ ಹಾಗೂ ಮೇಲ್ಛಾವಣಿ ಹಾಳಾಗಿದೆ. ನಷ್ಟ ಅನುಭವಿಸಿದ ಕಾರಣ ವೆಂಕಟೇಶ್ ಕಂಗಲಾಗಿದ್ದು, ಪರಿಹಾರಕ್ಕಾಗಿ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net