ಅಲ್ದಾಳದಲ್ಲಿ ವೀರಭದ್ರೇಶ್ವರ ಜಾತ್ರೆ ಅದ್ದೂರಿ

23mnv02
Published on

ಮಾನ್ವಿ: ಅಲ್ದಾಳ ಗ್ರಾಮದಲ್ಲಿ ಶುಕ್ರವಾರ ಸಂಜೆ ಭದ್ರಕಾಳಿ ವೀರಭದ್ರೇಶ್ವರ ರಥೋತ್ಸವ ವಿಜೃಂಭಣೆಯಿಂದ ಜರುಗಿತು.

ದೇವಸ್ಥಾನದಲ್ಲಿ ಬೆಳಗ್ಗೆ ಮಹಾರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಗೋಪುರಕ್ಕೆ ಕಲಶಾರೋಹಣ, ನೂತನ ರಥಕ್ಕೆ ಕಲಶಾರೋಹಣ ನಡೆದವು. ಸಂಜೆ ಭದ್ರಕಾಳಿ ವೀರಭದ್ರೇಶ್ವರ ಉತ್ಸವ ಮೂರ್ತಿಗಳನ್ನು ಗ್ರಾಮದ ಬೀದಿಗಳಲ್ಲಿ ಪುರವಂತಿಗೆ ಹಾಗೂ ನಂದಿ ಧ್ವಜದೊಂದಿಗೆ ಮೆರವಣಿಗೆ ನಡೆಸಲಾಯಿತು.

ಉತ್ಸವ ಮೂರ್ತಿಗಳನ್ನು ರಥದಲ್ಲಿರಿಸಿದ ನಂತರ ರಥೋತ್ಸವ ನಡೆಯಿತು. ದೇವಸ್ಥಾನದ ಆವರಣದಲ್ಲಿರುವ ಅಗ್ನಿ ಕುಂಡ ಪ್ರವೇಶಿಸುವ ಮೂಲಕ ಭಕ್ತರು ಹರಕೆ ತೀರಿಸಿದರು. ಶಾಸಕ ಹಂಪಯ್ಯ ನಾಯಕರನ್ನು ಲಾಳಗೊಂಡರ ಸಮಾಜದ ಜಿಲ್ಲಾಧ್ಯಕ್ಷ ವೀರಭದ್ರಗೌಡ ಅಲ್ದಾಳ ಹಾಗೂ ಸಿದ್ದಪ್ಪಗೌಡ ಅಲ್ದಾಳ ಗೌರವಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net