

ರಾಯಬಾಗ: ಮದ್ಯವ್ಯಸನಿಗಳು ಮದ್ಯ ಸೇವನೆಯಿಂದ ಹೊರಬಂದು ಕುಟುಂಬದೊಂದಿಗೆ ಸುಖಕರ ಜೀವನ ನಡೆಸುವ ಮೂಲಕ ಸಮಾಜದಲ್ಲಿ ಒಳ್ಳೆಯ ವ್ಯೆಕ್ತಿಯಾಗಿ ಬಾಳಬೇಕೆಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಸದಾಶಿವ ದೇಶಿಂಗೆ ಹೇಳಿದರು.
ತಾಲೂಕಿನ ಭಿರಡಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಹಾಗೂ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದನ 1,797ನೇ ಮದ್ಯವರ್ಜನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಚಿಕ್ಕೋಡಿ ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಸಂಜಯ ನಾಡಗೌಡರ ಮಾತನಾಡಿದರು.
ಸಾನ್ನಿಧ್ಯ ವಹಿಸಿದ್ದ ಬಾವನಸೌಂದತ್ತಿ ಓಂಕಾರ ಆಶ್ರಮದ ಶಿವಶಂಕರ ಸ್ವಾಮೀಜಿ ಆಶೀರ್ವಚನ ನೀಡಿದರು. ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ವಿಠ್ಠಲ ಸಾಲಿಯಾನ, ಡಾ.ಬಾಹುಬಲಿ ಕಾಸರ, ಮಲ್ಲಪ್ಪ ನಿಶಾನದಾರ, ಅಣ್ಣಾಸಾಬ ನಿಶಾನದಾರ, ವಸಂತ ಹೊಸಮನಿ, ವಿದ್ಯಾ ಪೂಜಾರಿ, ಅಜಿತ ಗಸ್ತೆ, ಭಾಸ್ಕರ್ ಎನ್., ಗಿರೀಶಗೌಡ ಪಾಟೀಲ ಇತರರು ಇದ್ದರು. ಶ್ರೀ ಧರ್ಮಸ್ಥಳ ತಾಲೂಕು ಯೋಜನಾಧಿಕಾರಿ ಸಚಿನಕುಮಾರ ಬಿ. ಸ್ವಾಗತಿಸಿದರು, ವೆಂಕಟೇಶಗೌಡ ನಿರೂಪಿಸಿದರು.