ಮದ್ಯಪಾನ ಸಮಾಜಕ್ಕೇ ಕಂಟಕ : ಯು.ಶರತ್ ಕೃಷ್ಣ ಪಡುವೆಟ್ನಾಯ ಅನಿಸಿಕೆ

camp
Published on

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಮದ್ಯಪಾನ ಸೇವನೆಯ ದುಷ್ಪರಿಣಾಮ ಮನೆಯವರಿಗೆ ಮಾತ್ರವಲ್ಲದೆ ಇಡೀ ಸಮಾಜದ ಮೇಲೆ ಬೀಳುತ್ತದೆ. ಸಮಾಜದಲ್ಲಿ ಅನೇಕ ರೀತಿಯ ದುಶ್ಚಟಗಳಲ್ಲಿ ಮದ್ಯಪಾನವು ಸಮಾಜವನ್ನು ಗಂಭೀರವಾಗಿ ಕಾಡುವ ದುಶ್ಚಟವಾಗಿದೆ ಎಂದು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಯು.ಶರತ್ ಕೃಷ್ಣ ಪಡುವೆಟ್ನಾಯ ಹೇಳಿದರು.

ಶುಕ್ರವಾರ ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢ ಶಾಲೆಯಲ್ಲಿ ಅ.4ರಿಂದ 11ರ ವರೆಗೆ ನಡೆಯಲಿರುವ 1867ನೇ ಮದ್ಯವರ್ಜನ ಶಿಬಿರ ಉದ್ಘಾಟಿಸಿ ಮಾತನಾಡಿದರು. ಶಿಬಿರದ ವ್ಯವಸ್ಥಾಪನಾ ಸಮಿತಿ ಗೌರವಾಧ್ಯಕ್ಷ ತಾಪಂ ಮಾಜಿ ಅಧ್ಯಕ್ಷ ಎನ್.ಜತ್ತನ್ನ ಗೌಡ ಅಧ್ಯಕ್ಷತೆ ವಹಿಸಿದ್ದರು.

ಗ್ರಾಮಾಭಿವೃದ್ಧಿ ಯೋಜನೆಯ ನಿವೃತ್ತ ಪ್ರಾದೇಶಿಕ ನಿರ್ದೇಶಕ ಸೀತಾರಾಮ ಶೆಟ್ಟಿ ಕೆಂಬರ್ಜೆ ಮಾತನಾಡಿ, ಜನಜಾಗೃತಿ ವೇದಿಕೆಯ ಇಂತಹ ಶಿಬಿರಕ್ಕೆ ಸೇರಿದ ಅನೇಕ ಕುಟುಂಬಗಳ ಸದಸ್ಯರು ಕುಡಿತ ಬಿಟ್ಟು ಸಂತೃಪ್ತಿ ಜೀವನ ಸಾಗಿಸುತ್ತಿದ್ದಾರೆ ಎಂದರು.

ಮದ್ಯವರ್ಜನ ಶಿಬಿರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನೋಟರಿ ವಕೀಲ ಶ್ರೀನಿವಾಸ ಗೌಡ ಮಾತನಾಡಿ, ಇಲ್ಲಿ ಬಂದು ಒಂದು ವಾರದ ಶಿಬಿರದಲ್ಲಿ ಭಾಗವಹಿಸುವವರನ್ನು ಹೀರೋ ಆಗಿ ಪರಿವರ್ತನೆ ಮಾಡುವ ಕಾರ್ಯ ಮಾಡಲಾಗುವುದು ಎಂದರು.

ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಕಾಸಿಂ ಮಲ್ಲಿಗೆ ಮನೆ, ಮಾಜಿ ಅಧ್ಯಕ್ಷ ಪಿ.ತಿಮ್ಮಪ್ಪ ಗೌಡ ಬೆಳಾಲು, ಉಜಿರೆ ವಲಯ ಅಧ್ಯಕ್ಷೆ ಪುಷ್ಪಾವತಿ ಆರ್.ಶೆಟ್ಟಿ, ಬೆಳಾಲು ಗ್ರಾಪಂ ಅಧ್ಯಕ್ಷೆ ವಿದ್ಯಾ ಶ್ರೀನಿವಾಸ ಗೌಡ, ಪಜಿರಡ್ಕ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಕೃಷ್ಣಪ್ಪ ಗುಡಿಗಾರ, ಬೆಳಾಲು ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಾರಾಯಣ ಗೌಡ, ಪ್ರಗತಿ ಬಂಧು ಕೇಂದ್ರ ಒಕ್ಕೂಟದ ಅಧ್ಯಕ್ಷ ಸೀತಾರಾಮ, ಪ್ರಗತಿ ಬಂಧು ಒಕ್ಕೂಟದ ವಲಯ ಅಧ್ಯಕ್ಷ ಉಮರ್, ಬೆಳಾಲು ಒಕ್ಕೂಟದ ಅಧ್ಯಕ್ಷರಾದ ರತ್ನಾಕರ ಆಚಾರ್ಯ ಬೆಳಾಲು, ಗಂಗಾಧರ ಸಾಲಿಯಾನ್ ಮಾಯ, ನೀಲಾವತಿ ಕೊಲ್ಪಾಡಿ ನವಜೀವನ ಸಮಿತಿ ಅಧ್ಯಕ್ಷರು ಸೂರಪ್ಪ ಗೌಡ, ಬಿರ್ಮಣ ಪೂಜಾರಿ, ಗ್ರಾಪಂ ಸದಸ್ಯ ಸತೀಶ್ ಎಳ್ಳುಗದ್ದೆ, ಉಜಿರೆ ಅಮೃತ್ ಸಿಲ್ಕ್ ಮಾಲೀಕ ಪ್ರಶಾಂತ್ ಜೈನ್, ಗುರುವಾಯನಕೆರೆ ಯೋಜನಾಧಿಕಾರಿ ದಯಾನಂದ ಪೂಜಾರಿ ಉಪಸ್ಥಿತರಿದ್ದರು.

ಶ್ರೀ ಕ್ಷೇತ್ರ ಧ.ಗ್ರಾ.ಯೋಜನೆ ಬೆಳ್ತಂಗಡಿ ತಾಲೂಕು ಯೋಜನಾಧಿಕಾರಿ ಸುರೇಂದ್ರ ಸ್ವಾಗತಿಸಿದರು. ಗಣೇಶ್ ಆಚಾರ್ಯ ಪ್ರಸ್ತಾವಿಕವಾಗಿ ಮಾತನಾಡಿದರು. ಜ್ಞಾನವಿಕಾಸ ಸಮನ್ವಯಾಧಿಕಾರಿ ಮಧುರ ನಿರೂಪಿಸಿದರು. ಉಜಿರೆ ವಲಯ ಮೇಲ್ವಿಚಾರಕಿ ವನಿತಾ ವಂದಿಸಿದರು.

ಜನಜಾಗೃತಿ ವೇದಿಕೆ ಮೂಲಕ ಬೆಳಾಲಿನಲ್ಲಿ ಈ ಮೊದಲು ನಡೆದಿದ್ದ ಶಿಬಿರದಲ್ಲಿ ಅನೇಕರು ಶಿಭಿರಾರ್ಥಿಗಳಾಗಿ ಭಾಗವಹಿಸಿ ಕುಡಿತದ ಚಟದಿಂದ ಹೊರ ಬಂದು ನೆಮ್ಮದಿ ಜೀವನ ಸಾಗಿಸುತ್ತಿದ್ದಾರೆ. ಈ ಬಾರಿಯ ಶಿಬಿರವು ಯಶಸ್ವಿಯಾಗಿ ಮುನ್ನಡೆಯಲಿ. - ಎನ್.ಜತ್ತನ್ನ ಗೌಡ, ಶಿಬಿರದ ವ್ಯವಸ್ಥಾಪಾನ ಸಮಿತಿ ಗೌರವಾಧ್ಯಕ್ಷ https://www.vijayavani.net/mahatma-award-2 https://www.vijayavani.net/nalin-kumar-press-meet

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net