ಮದ್ಯವರ್ಜನ ಶಿಬಿರ ಸಮಾಲೋಚನಾ ಸಭೆ

New Project (1)
Published on

ಬಂಟ್ವಾಳ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿಟ್ಲ ಯೋಜನಾ ಕಚೇರಿ ವ್ಯಾಪ್ತಿಯ ಮದ್ಯವರ್ಜನ ಶಿಬಿರದ ಸಮಾಲೋಚನಾ ಸಭೆ ಮಂಚಿ ಸಾಲೆತ್ತೂರು ವಲಯದ ಮೋಂತಿಮಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಸಭಾಂಗಣದಲ್ಲಿ ದೇವಸ್ಥಾನ ಆಡಳಿತ ಮೊಕ್ತೇಸರ ಎಸ್.ಆರ್.ಸತೀಶ್ಚಂದ್ರ ಅಧ್ಯಕ್ಷತೆಯಲ್ಲಿ ನಡೆಯಿತು.

ಕೇಂದ್ರ ಒಕ್ಕೂಟ ಅಧ್ಯಕ್ಷ ನವೀನ್‌ಚಂದ್ರ, ತಾಲೂಕಿನ ಭಜನಾ ಪರಿಷತ್ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಪಾಲ್ತಾಜೆ, ವಲಯ ಜನಜಾಗೃತಿ ಅಧ್ಯಕ್ಷ ಅರವಿಂದ ರೈ, ಸಾಲೆತ್ತೂರು ವಲಯ ಅಧ್ಯಕ್ಷ ದಿನೇಶ್ ಶೆಟ್ಟಿ, ಮಂಚಿ ಒಕ್ಕೂಟ ಅಧ್ಯಕ್ಷ ದಿವಾಕರ್ ನಾಯಕ್ ಉಪಸ್ಥಿತರಿದ್ದರು.

ಜನಜಾಗೃತಿ ವೇದಿಕೆ ಉಡುಪಿ ಪ್ರಾದೇಶಿಕ ಕಚೇರಿ ಯೋಜನಾಧಿಕಾರಿ ಗಣೇಶ್ ಆಚಾರ್ಯ ಶಿಬಿರದ ಮಾಹಿತಿ ನೀಡಿದರು. ಮಂಚಿ ವಲಯ ಮೇಲ್ವಿಚಾರಕಿ ಶಶಿಕಲಾ ಸ್ವಾಗತಿಸಿದರು. ಸಾಲೆತ್ತೂರು ಮೇಲ್ವಿಚಾರಕಿ ಸವಿತಾ ನಿರೂಪಿಸಿದರು. ವಿಟ್ಲ ಯೋಜನಾಧಿಕಾರಿ ಸುರೇಶ್ ಗೌಡ ವಂದಿಸಿದರು.

ಸಮಿತಿ ರಚನೆ

ಮದ್ಯವರ್ಜನ ಶಿಬಿರದ ಸಮಿತಿ ರಚಿಸಲಾಯಿತು. ಸಮಿತಿ ಗೌರವಾಧ್ಯಕ್ಷರಾಗಿ ಎಸ್.ಆರ್.ಸತೀಶ್ಚಂದ್ರ, ಅಧ್ಯಕ್ಷರಾಗಿ ರಾಮಪ್ರಸಾದ್ ರೈ ತಿರುವಾಜೆ, ಕಾರ್ಯದರ್ಶಿಯಾಗಿ ತಾಲೂಕಿನ ಯೋಜನಾಧಿಕಾರಿ ಸುರೇಶ್ ಗೌಡ, ಕೋಶಾಧಿಕಾರಿಯಾಗಿ ನಾರಾಯಣ ಶೆಟ್ಟಿ ಕುಲ್ಯಾರು ಆಯ್ಕೆಗೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net