ಅಪಘಾತದಲ್ಲಿ ಮದ್ಯವ್ಯಸನಿ ಸಾವು

bike accident 1
Published on

ನರಗುಂದ: ರಸ್ತೆ ಪಕ್ಕ ಮಲಗಿದ್ದ ಮದ್ಯ ವ್ಯಸನಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಪಟ್ಟಣದ ಅರಿಷಿಣಗೋಡಿ ರಸ್ತೆ ಹೊರವಲಯದಲ್ಲಿ ಸಂಭವಿಸಿದೆ.

ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಕಾತರಕಿ ಗ್ರಾಮದ ಸುರೇಶ ಡೊಂಕಪ್ಪ ದಳವಾಯಿ (39) ಮೃತಪಟ್ಟವ.

ಶನಿವಾರ ನರಗುಂದದಿಂದ ಕೊಣ್ಣೂರ ಮಾರ್ಗವಾಗಿ ಬಾದಾಮಿಗೆ ಹೋಗುವ ಬಸ್ ಹತ್ತುವ ಬದಲು ಸುರೇಬಾನಕ್ಕೆ ಹೋಗುವ ಬಸ್ ಹತ್ತಿದ್ದ. ಈ ವೇಳೆ ಬಸ್ ಕಂಡಕ್ಟರ್ ಇದು ಕೊಣ್ಣೂರಿಗೆ ಹೋಗುವುದಿಲ್ಲ ಎಂದು ಹೇಳಿದಾಗ ಮಾರ್ಗ ಮಧ್ಯದಲ್ಲಿಯೇ ಇಳಿದು ಮದ್ಯದ ಅಮಲಿನಲ್ಲಿ ನರಗುಂದದಿಂದ ಅರಿಷಿನಗೋಡಿ ಕಡೆಗೆ ರಾತ್ರಿ 8 ಗಂಟೆ ಸುಮಾರಿಗೆ ನಡೆದುಕೊಂಡು ಹೋಗುವಾಗ ರಸ್ತೆ ಪಕ್ಕದ ಜಮೀನೊಂದರಲ್ಲಿ ಮಲಗಿದ್ದಾಗ ಈ ದುರ್ಘಟನೆ ಸಂಭವಿಸಿದೆ.

ಈ ಕುರಿತು ಮೃತನ ಪತ್ನಿ ಲಕ್ಷ್ಮವ್ವ ದಳವಾಯಿ ನರಗುಂದ ಠಾಣೆಗೆ ದೂರು ನೀಡಿದ್ದು, ಸಿಪಿಐ ಮಂಜುನಾಥ ನಡುವಿನಮನಿ ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net