ಅಪಘಾತಕ್ಕೊಳಗಾದ ಕಾರಿನಲ್ಲಿ ಮದ್ಯ ಪತ್ತೆ

CAR ...1
Published on

ಅಂಕೋಲಾ: ಅಪಘಾತಕ್ಕೊಳಗಾದ ಕಾರಿನಲ್ಲಿ ಲಕ್ಷಾಂತರ ರೂ. ಮೌಲ್ಯದ ಅಕ್ರಮ ಗೋವಾ ಮದ್ಯ ಪತ್ತೆಯಾದ ಘಟನೆ ತಾಲೂಕಿನ ರಾ.ಹೆದ್ದಾರಿ 63ರ ಸುಂಕಸಾಳ ವ್ಯಾಪ್ತಿಯ ಕೋಟೆಪಾಲ ಹತ್ತಿರ ಮಂಗಳವಾರ ರಾತ್ರಿ ನಡೆದಿದೆ.

ಚಾಲಕನ ಅತಿವೇಗ ಹಾಗೂ ಅಜಾಗರೂಕತೆಯಿಂದ ನಿಯಂತ್ರಣ ತಪ್ಪಿ ಟವೆರಾ ಕಾರು ರಸ್ತೆಯ ಬದಿ ಚರಂಡಿಯಲ್ಲಿ ಪಲ್ಟಿಯಾಗಿದೆ. ಟ್ರಾಫಿಕ್ ಪಿಎಸ್‌ಐ ಸುನೀಲ ಹುಲ್ಲೊಳ್ಳಿ ಸ್ಥಳಕ್ಕೆ ಭೇಟಿ ಪರಿಶೀಲಿಸಿದ ವೇಳೆ ಕಾರಿನಲ್ಲಿ ಅಕ್ರಮ ಗೋವಾ ಮದ್ಯ ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ. ಅಂದಾಜು 1.33 ಲಕ್ಷ ರೂ. ಮೌಲ್ಯದ ವಿವಿಧ ಕಂಪನಿಯ ಮದ್ಯ ಬಾಟಲಿಗಳು ಪತ್ತೆಯಾಗಿದೆ. ಈ ಕುರಿತು ಪಿಎಸ್‌ಐ ಜಯಶ್ರೀ ಪ್ರಭಾಕರ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net