Alcohol seizure 2.5 ಲಕ್ಷ ರೂ. ಮೌಲ್ಯದ ಅಕ್ರಮ ಗೋವಾ ಮದ್ಯ ವಶ

Alcohol seizure
Published on

ಜೊಯಿಡಾ/ Alcohol seizure: ಸುಮಾರು 2.5 ಲಕ್ಷ ರೂ. ಮೌಲ್ಯದ 106 ಲೀಟರ್ ಗೋವಾ ಮದ್ಯ ಸಾಗಿಸುತ್ತಿದ್ದ ಲಾರಿಯನ್ನು ಅನಮೋಡ ತನಿಖಾ ಠಾಣೆಯಲ್ಲಿ ಅಬಕಾರಿ ಅಧಿಕಾರಿಗಳು ಸೋಮವಾರ ವಶಕ್ಕೆ ಪಡೆದಿದ್ದಾರೆ.

ಬೆಂಗಳೂರು ನೋಂದಣಿ ಸಂಖ್ಯೆಯ ಈಚರ್ ಲಾರಿಯಲ್ಲಿ ರಟ್ಟಿನ ಪೆಟ್ಟಿಗೆಗಳಲ್ಲಿ 33 ಲೀಟರ್ ವಿಸ್ಕಿ, 73 ಲೀಟರ್ ಬಿಯರ್ ಸೇರಿ ಮದ್ಯವನ್ನು ವಶಕ್ಕೆ ಪಡೆಯಲಾಗಿದೆ. ಲಾರಿ ಚಾಲಕ ಉತ್ತರ ಪ್ರದೇಶ ಮೂಲದ ಮುಕೇಶಸಿಂಗ್‌ಇನ್ನು ಬಂಽಸಿ, ಲಾರಿಯನ್ನು ಜಪ್ತು ಮಾಡಲಾಗಿದೆ.

ಅಬಕಾರಿ ಇನ್ಸ್ಪೆಕ್ಟರ್ ಮಹೇಂದ್ರ ನಾಯ್ಕ್, ಸಬ್ ಇನ್ಸ್ಪೆಕ್ಟರ್ ಟಿ. ಬಿ. ಮಲ್ಲಣ್ಣವರ, ಸಿಬ್ಬಂದಿ ಮಹಾಂತೇಶ್ ಹೊನ್ನೂರ್, ರವಿ ಸಂಕಣ್ಣವರ್, ಬಸವರಾಜ್ ಗಡ್ಡೆನ್ನವರ್, ಹಾಗೂ ಸದಾಶಿವ ರಾಠೋಡ್ ಪಾಲ್ಗೊಂಡಿದ್ದರು.

Alcohol seizure

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net