ಮದ್ಯ ಸಿಗದಿದ್ದಕ್ಕೆ ವ್ಯಕ್ತಿ ಆತ್ಮಹತ್ಯೆ

liquor
Published on

ಬೆಳಗಾವಿ: ಮದ್ಯ ಸಿಗಲಿಲ್ಲ ಎಂಬ ಕಾರಣಕ್ಕೆ ನಗರದ ಅನಗೋಳದ ಬೆಂಡಿಗೇರಿ ಚಾಳದ ನಿವಾಸಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮೂಲತಃ ಸವದತ್ತಿಯ ನಿವಾಸಿಯಾದ ದೇವೇಂದ್ರಪ್ಪ ಹಡಪದ (42) ಮೃತ ವ್ಯಕ್ತಿ.

ಸಲೋನ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ ದೇವೇಂದ್ರಪ್ಪ ಅನಗೋಳದಲ್ಲಿ ಬಾಡಿಗೆ ಮನೆಯಲ್ಲಿದ್ದರು. ಮಾ.31ರ ರಾತ್ರಿಯಿಂದ ಏ. 1ರ ಬೆಳಗ್ಗೆ 10ರ ಅವಧಿಯಲ್ಲಿ ಆತ್ಮಹತ್ಯಗೆ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ. ‘ಪತಿಗೆ ಮದ್ಯ ಸೇವಿಸುವ ಚಟವಿತ್ತು.

ಮನೆಯವರು ಹಾಗೂ ಸಲೂನ್ ಮಾಲೀಕರು ಬುದ್ಧಿವಾದ ಹೇಳಿದರೂ ಕೇಳಿರಲಿಲ್ಲ. ಲಾಕ್‌ಡೌನ್ ಆದಾಗಿನಿಂದ ಅಂಗಡಿಯೂ ಬಂದ್ ಆಗಿತ್ತು. ಮದ್ಯ ಸಿಗಲಿಲ್ಲವೆಂದರೆ ಬದುಕಲಾಗುವುದಿಲ್ಲ ಎಂದು ಅಳುತ್ತಾ ಫೋನ್ ಕರೆ ಕಟ್ ಮಾಡಿದ್ದರು’ ಎಂದು ಮೃತನ ಪತ್ನಿ ಹೇಮಾವತಿ ತಿಳಿಸಿದ್ದಾರೆ. ಟಿಳಕವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net