ಮದ್ಯ ಮುಕ್ತ ರಾಜ್ಯಕ್ಕಾಗಿ ಸಿಎಂಗೆ ತಲಾ 10ರೂ.ಮನಿ ಆರ್ಡರ್ ಕಳುಹಿಸಿದ ಮದ್ಯ ವಿರೋಧಿ ಸಮಿತಿ ಸದಸ್ಯರು

200520 Kampli Anti Liquor Committee Protest
Published on

ಕಂಪ್ಲಿ: ಮದ್ಯ ಮಾರಾಟ ಮಾಡಿ ಸರ್ಕಾರ ನಡೆಸುವ ಬದಲು ನಮ್ಮ ಪ್ರಾಮಾಣಿಕ ದುಡಿಮೆಯ ಹತ್ತು ರೂಪಾಯಿ ಪಡೆದು ಮದ್ಯ ಮುಕ್ತ ರಾಜ್ಯವನ್ನಾಗಿಸಿ ಎಂದು ಮದ್ಯ ವಿರೋಧಿ ಸಮಿತಿ ಜಿಲ್ಲಾ ಸದಸ್ಯೆ ಕೊಲ್ಮಿ ರೇಣುಕಮ್ಮ ಆಗ್ರಹಿಸಿದರು.

ಪಟ್ಟಣದ 4ನೇ ವಾರ್ಡ್ ಕೆಂಚಮ್ಮ ಗುಡಿ ಆವರಣದಲ್ಲಿ ಬುಧವಾರ ಮದ್ಯಮುಕ್ತ ರಾಜ್ಯಕ್ಕಾಗಿ ಆಗ್ರಹಿಸಿ ತಲಾ ಹತ್ತು ರೂ. ಹತ್ತು ಮಹಿಳೆಯರು ಮುಖ್ಯಮಂತ್ರಿಗಳಿಗೆ ಮನಿ ಆರ್ಡರ್ ಕಳುಹಿಸುವ ಮುನ್ನ ಮಾತನಾಡಿದರು. ಮದ್ಯ ಮಾರಾಟ ಮಾಡಿಯೇ ಸರ್ಕಾರ ನಡೆಸುವ ತೀರ್ಮಾನ ಅವಮಾನಕರವಾಗಿದೆ. ಮದ್ಯ ಮಾರಾಟ ಪುನರಾರಂಭದಿಂದ ಕುಟುಂಬಗಳಲ್ಲಿ ನೆಮ್ಮದಿ ಮಾಯವಾಗಿ ದೌರ್ಜನ್ಯ, ಹಿಂಸೆ, ಕೊಲೆಗಳು ನಡೆಯುತ್ತಿವೆ. ಕುಟುಂಬಗಳಲ್ಲಿ ಆಹಾರ ಭದ್ರತೆ ಇಲ್ಲದಂತಾಗಿದೆ. ಮದ್ಯ ಮಾರಾಟ ಬೇಡ, ಬದಲಿಗೆ ಕೆಲಸ ಕೊಡಿ, ನೀರು ಕೊಡಿ ಎಂದು ಆಗ್ರಹಿಸಿದರು.

10 ಮಹಿಳೆಯರು ತಲಾ ಹತ್ತು ರೂಪಾಯಿಯನ್ನು ಸಿಎಂಗೆ ಮನಿ ಆರ್ಡರ್ ಮೂಲಕ ರವಾನಿಸಿದರು. ಮದ್ಯ ವಿರೋಧಿ ಸಮಿತಿ ಜಿಲ್ಲಾ ಸದಸ್ಯೆ ಎಚ್.ಮಂಜುಳಾ, ಹುಲಿಗೆಮ್ಮ, ಪಾರ್ವತಿ, ಹುಲಿಗೆಮ್ಮ, ರತ್ನಮ್ಮ, ವಿರುಪಮ್ಮ, ರಾಮಕ್ಕ, ದುರ್ಗಮ್ಮ, ಸೇವಂತಿ, ಯಂಕಮ್ಮ, ಕರ್ನಾಟಕ ಮಾದಿಗರ ರಕ್ಷಣಾ ವೇದಿಕೆ ರಾಜ್ಯ ಅಧ್ಯಕ್ಷ ಕರಿಯಪ್ಪ ಗುಡಿಮನಿ, ಕರ್ನಾಟಕ ಜನಶಕ್ತಿ ರಾಜ್ಯ ಸಮಿತಿ ಸದಸ್ಯ ವಸಂತರಾಜ ಕಹಳೆ, ಪ್ರಮುಖರಾದ ಇ.ಧನಂಜಯ, ಶಶಿಕುಮಾರ್, ನೀಲಪ್ಪ ಪೇಂಟರ್, ಮಹಿಳಾ ಮುನ್ನಡೆ ಸದಸ್ಯರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net