ಮದ್ಯ ಸೇವಿಸಿದಾಗ ಹಸಿವಿನಿಂದ ಬಳಲಿ ಸಾವು

Crime Logo
Published on

ರಾಣೆಬೆನ್ನೂರ: ವಿಪರೀತ ಮದ್ಯ ಸೇವಿಸುತ್ತಿದ್ದ ವ್ಯಕ್ತಿಯೊಬ್ಬ ಮನೆಬಿಟ್ಟು ಬಂದು ಹಸಿವಿನಿಂದ ಬಳಲಿ ಮೃತಪಟ್ಟ ಘಟನೆ ನಗರದ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.

ಹಾವೇರಿ ತಾಲೂಕಿನ ಕುರುಬಗೊಂಡ ಗ್ರಾಮದ ಕರಬಸಪ್ಪ ಮಲ್ಲಪ್ಪ ಹಾವೇರಿ (44) ಮೃತ ವ್ಯಕ್ತಿ.

ಈತ ವಿಪರೀತ ಮದ್ಯ ಸೇವಿಸುತ್ತಿದ್ದ ಮನೆ ಬಿಟ್ಟು ಊರೂರು ಅಲೆಯುತ್ತಿದ್ದ. ಮಂಗಳವಾರ ನಗರದಲ್ಲಿ ವಿಪರೀತ ಮದ್ಯ ಸೇವಿಸಿದ್ದ ಬಿದ್ದಾಗ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಕುರಿತು ಶಹರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net