ಮದ್ಯ ಸೇವನೆಯಿಂದ ರಾಣೆಬೆನ್ನೂರಿನಲ್ಲಿ ಇಬ್ಬರು ವ್ಯಕ್ತಿಗಳು ಸಾವು

Crime Logo
Published on

ರಾಣೆಬೆನ್ನೂರ: ವಿಪರೀತ ಮದ್ಯ ಸೇವಿಸಿದ ವ್ಯಕ್ತಿ ಮಲಗಿದಲ್ಲಿಯೆ ಮೃತಪಟ್ಟ ಪ್ರತ್ಯೇಕ ಎರಡು ಘಟನೆ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಗುರುವಾರ ಸಂಭವಿಸಿದೆ.
ಇಲ್ಲಿಯ ಸಿದ್ದೇಶ್ವರ ನಗರದ ನಾಗರಾಜ ಕೇಶಪ್ಪ ಎಣ್ಣಿಮನಿ (45) ಹಾಗೂ ತಾಲೂಕಿನ ಕರೂರ ಗ್ರಾಮದ ನಾಗರಾಜ ನಿಂಗಪ್ಪ ಕರೆಸೊಮ್ಮಣ್ಣನವರ (42) ಮೃತ ವ್ಯಕ್ತಿಗಳು.
ನಾಗರಾಜ ಎಣ್ಣಿಮನಿ ಎಂಬುವನು ವಿಪರೀತ ಮದ್ಯ ಸೇವನೆ ಮಾಡುತ್ತಿದ್ದ. ವಿಪರೀತ ಮದ್ಯ ಸೇವಿಸಿದ ಅಮಲಿನಲ್ಲಿ ರಸ್ತೆ ಬದಿ ಮಲಗಿದ್ದಾಗ ಅಲ್ಲಿಯೆ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾಗರಾಜ ಕರೆಸೊಮಣ್ಣನವರ ಎಂಬುವನು ಕೋಡಿಯಾಲ ಹೊಸಪೇಟೆ ಗ್ರಾಮದ ಬಳಿ ಬಸ್ ನಿಲ್ದಾಣದಲ್ಲಿ ಮದ್ಯ ಸೇವಿಸಿ ಬಿದ್ದು ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಕುರಿತು ಕುಮಾರಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net