ಅಲ್ಬಿದಾ ಗೀತೆ ಮೂಲಕ ವಿದಾಯ

6 SIRGERE 01
ಸಿರಿಗೇರಿಯಲ್ಲಿ ಪೀರಲು ದೇವರುಗಳನ್ನು ಪ್ರತಿಷ್ಠಾಪಿಸಿರುವುದು.
Published on

ಸಿರಿಗೇರಿ: ಗ್ರಾಮದಲ್ಲಿ 10 ದಿನಗಳ ಕಾಲ ನಡೆಯುವ ಮೊಹರಂ ಹಬ್ಬವನ್ನು ಹಿಂದು-ಮುಸ್ಲಿಮರು ಭಾವೈಕ್ಯದಿಂದ ಆಚರಿಸುತ್ತಾರೆ.\

ಹಿರೇ ಮಸೀದಿ, ಪೈಲ್ವಾನ್ ಮಸೀದಿ, ಭೀಮಣ್ಣ ಮಸೀದಿ, ಹಾಜಿ ಸಾಬ್ ಮಸೀದಿ, ಮಕಂದರ್ ಮಸೀದಿ ಸೇರಿ 5 ಮಸೀದಿಗಳಿದ್ದು, ಗುದ್ದಲಿ ಹಾಕಿದ ನಂತರ 28 ದೇವರನ್ನು ಕೂರಿಸುತ್ತಾರೆ. 8ನೇ ದಿನ ಗಂಧ, 9ನೇ ದಿನ ಕತಲ್ ರಾತ್ರಿ ದಿನ ದೇವರಿಗೆ ಬಟ್ಟೆ, ಬೆಳ್ಳಿ ಕುದುರೆ, ತೊಟ್ಟಿಲು, ಹಣವನ್ನು ನೀಡಿ ಹರಕೆ ಸಲ್ಲಿಸುತ್ತಾರೆ.

ಶಾವಿಗೆ, ಚೊಂಗೆ ರೊಟ್ಟಿ, ಬೆಲ್ಲದ ಹಾಲನ್ನು ದೇವರಗೆ ಅರ್ಪಿಸಿ ನಂತರ ಭಕ್ತರಿಗೆ ಹಂಚುತ್ತಾರೆ. ದೇವರು ಸಾಯುವ ದಿನ ಬೆಳಗಿನ ಜಾವ ದೇವರನ್ನು ಹೊತ್ತವರು 5 ಬಾರಿ ಅಲಾಯಿ ಕುಣಿಯನ್ನು ಸುತ್ತುವರೆದು ಕೆಂಡ ತುಳಿದು ಊರಿನಲ್ಲಿ ಸುತ್ತಾಡಿ ಮಸೀದಿ ಸೇರುತ್ತವೆ.

ಸಂಜೆ ಅಗಸೆ ಮನೆ ಹತ್ತಿರ ಹೋಗಿ ಹಿಂದಿರುಗಿ ಸಾಯುವ ಬಾವಿಗೆ ತಲುಪಿ ಹೊದಿಕೆ ಮಾಡುತ್ತಾರೆ. ಊರಿನ ಪ್ರಮುಖರು ಹಸೇನ್, ಹುಸೇನ್‌ರ ಅಲ್ಬಿದಾ ಗೀತೆ ಮೂಲಕ ವಿದಾಯ ಹೇಳುತ್ತಾರೆ. ಭಕ್ತರು ಹುಲಿವೇಷ ಧರಿಸಿ ಪ್ರಮುಖ ಬೀದಿಗಳಲ್ಲಿ ಕುಣಿಯುವುದು ವಾಡಿಕೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net