

ಅಳವಂಡಿ: ಎಲ್ಲರೂ ದೇಶಪ್ರೇಮ ಬೆಳೆಸಿಕೊಳ್ಳಬೇಕು ಎಂದು ಶಿಕ್ಷಕ ನೀಲಪ್ಪ ಹಕ್ಕಂಡಿ ತಿಳಿಸಿದರು.
ಗ್ರಾಮದಲ್ಲಿ ಕಾರ್ಗಿಲ್ ವಿಜಯ್ ದಿವಸ್ ಆಚರಣೆ ಅಂಗವಾಗಿ ಹುತಾತ್ಮ ಯೋಧ ಮಲ್ಲಯ್ಯ ಮೇಗಳಮಠ ಸಮಾಧಿ ಬಳಿ ಶುಕ್ರವಾರ ಹಮ್ಮಿಕೊಂಡಿದ್ದ ನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸೈನಿಕರು ಹಗಲು, ರಾತ್ರಿ, ಚಳಿ, ಮಳೆ ಗಾಳಿಯನ್ನು ಲೆಕ್ಕಿಸದೆ ಕರ್ತವ್ಯ ನಿರ್ವಹಿಸುತ್ತಾರೆ. ಕಾರ್ಗಿಲ್ ವಿಜಯಕ್ಕೆ ನೂರಾರು ಯೋಧರು ಜೀವವನ್ನು ತಾಯಿ ನಾಡಿಗೆ ನೀಡಿ ಹುತಾತ್ಮರಾಗಿದ್ದಾರೆ. ಅವರನ್ನು ಸದಾ ಸ್ಮರಿಸಬೇಕು ಎಂದರು.
ಪಿಡಿಒ ಕೊಟ್ರಪ್ಪ ಅಂಗಡಿ, ವೈದ್ಯಾಧಿಕಾರಿ ಡಾ.ಚಂದ್ರಶೇಖರ ಮೇಟಿ, ಪ್ರಮುಖರಾದ ಸತೀಶ ಜಾಣಗಾರ, ಮಲ್ಲಿಕಾರ್ಜುನ, ಶ್ರೀನಿವಾಸ, ಶಿವಕುಮಾರ, ಚನ್ನವೀರಯ್ಯ, ಬಸಪ್ಪ ಗಾಳಿ, ನಾಗರಾಜ, ಸಾವಿತ್ರಿ, ಸೌಮ್ಯಾ, ಕಲ್ಲಪ್ಪ, ಕೊಟ್ರೇಶ ಅಂಗಡಿ, ದೇವೇಂದ್ರರಡ್ಡಿ, ಚಾಣಾಕ್ಷಯ್ಯ, ಮಂಜುನಾಥ, ಮಲ್ಲಪ್ಪ, ದೇವೇಂದ್ರಪ್ಪ, ಪರಸಪ್ಪ, ಲಕ್ಷ್ಮವ್ವ, ಸುನಂದವ್ವ ಇತರರಿದ್ದರು.
ಸಿಡಿಸಿ ಸದಸ್ಯರಾದ ಜಯಶ್ರೀ ಕಂದಕೂರು, ಕಳಕಪ್ಪ ಕುರಿ, ಮಾಜಿ ಸೈನಿಕರ ಸಂಘದ ಅಧ್ಯಕ್ಷ ಮಲ್ಲಪ್ಪ ಎಸ್, ಪತ್ರಕರ್ತ ಮಹಾಂತೇಶ ಛಲವಾದಿ, ಪ್ರಾಧ್ಯಾಪಕರಾದ ಎಚ್.ಎಂ.ಗುಡಿಹಿಂದಿನ, ವೈ.ಬಿ.ಅಂಗಡಿ, ಉಪನ್ಯಾಸಕರಾದ ನಂದಾ, ಮಂಜುಳಾ ಮಡಿವಾಳರ, ವೀರೇಶ ಗಡಾದ, ಶಶಿಕುಮಾರ, ವಿನೋದಕುಮಾರ ಸಿದ್ದಣ್ಣನವರ ಇತರರಿದ್ದರು.