ಶಿಕ್ಷಣದಿಂದ ಸಾಧಿಸಲು ಸಾಧ್ಯ

Untitled design
Published on

ಅಳವಂಡಿ: ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡುವ ಮೂಲಕ ಸಾಧಿಸಲು ಪ್ರೋತ್ಸಾಹಿಸಿ ಎಂದು ಪ್ರಾಚಾರ್ಯ ಎನ್.ಎಸ್.ಜಾಧವ ಹೇಳಿದರು.

ಸಮೀಪದ ಹನಕುಂಟಿ ಗ್ರಾಮದ ಹಿಂದುಳಿದ ವರ್ಗಗಳ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕರ್ನಾಟಕ ಆರೋಗ್ಯ ಸಂವರ್ಧನಾ ಪ್ರತಿಷ್ಠಾನ ಸಂಸ್ಥೆ (ಕೆಎಚ್‌ಪಿಟಿ)ಯ ಸ್ಫೂರ್ತಿ ಯೋಜನೆಯಿಂದ ನಾಯಕತ್ವ ಹಾಗೂ ಸಂವಹನ ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಹಿಳೆಯರಿಗೆ ಸಿಗಬೇಕಾದ ಗೌರವ, ಮೌಲ್ಯಗಳನ್ನು ಖಾತ್ರಿಗೊಳಿಸುವುದು, ಹಕ್ಕುಗಳ ಕುರಿತು ಅರಿವು ಮೂಡಿಸುವುದು ಎಲ್ಲರ ಜವಾಬ್ದಾರಿ. ಉತ್ತಮ ಶಿಕ್ಷಣದಿಂದ ಸಾಧನೆ ಮಾಡಲು ಸಾಧ್ಯ. ಆದ್ದರಿಂದ ವಿದ್ಯೆಗೆ ಪ್ರಾಶಸ್ತ ನೀಡಬೇಕು ಎಂದರು.

ಕ್ಷೇತ್ರ ಸಂಯೋಜಕಿ ಸುಷ್ಮಾ ಸಂಗರಡ್ಡಿ ಮಾತನಾಡಿ, ಹದಿಹರೆಯದ ಹೆಣ್ಣು ಮಕ್ಕಳಲ್ಲಿ ನಾಯಕತ್ವ ಗುಣ, ಧೈರ್ಯ ಬೆಳೆಸಿಕೊಳ್ಳಲು ಕೆಎಚ್‌ಪಿಟಿ ಅನೇಕ ಯೋಜನೆ ಜಾರಿಗೊಳಿಸಿದೆ. ಹದಿಹರೆಯದ ಹೆಣ್ಣು ಮಕ್ಕಳ ಬೆಳವಣಿಗೆಗಾಗಿ ಪಠ್ಯದ ಜತೆ ಸಂವಾದ, ಕ್ರೀಡೆ ಮುಂತಾದ ಚಟುವಟಿಕೆಯಲ್ಲಿ ಪಾಲ್ಗೊಳ್ಳುವಂತೆ ಮಾಡಲಾಗುತ್ತಿದೆ ಎಂದರು.

ನಿಲಯ ಮೇಲ್ವಿಚಾರಕ ಎಸ್.ಎಪ್.ಪಾಟೀಲ, ಶಿಕ್ಷಕ ಸಿದ್ದಯ್ಯ ಹಿರೇಮಠ, ಸಮುದಾಯ ಸಂಘಟಕರಾದ ಅರುಣ, ಜುನಾಬೀ, ಅಕ್ಕಮ್ಮ, ಕಲ್ಪನಾ, ಪ್ರಿಯಾಂಕಾ, ಶಿವಮ್ಮ, ಸುನಂದಾ, ಪಕೀರಮ್ಮ, ಆರ್‌ಜಿಗಳಾದ ರೇಣುಕಾ, ಹೇಮಾ, ಮಂಜುಳಾ, ರಾಧಿಕಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net