ಮಹಿಳೆಯರನ್ನು ಆರ್ಥಿಕ ಸಬಲರಾಗಿಸಲು ಒತ್ತು

background (14)
ಅಳವಂಡಿ ಗ್ರಾಮದಲ್ಲಿ ಏರ್ಪಡಿಸಿದ್ದ ದೀಪ ಸಂಜೀವಿನಿ ಮಾರಾಟದ ಕಾರ್ಯಕ್ರಮಕ್ಕೆ ಗಣ್ಯರು ಚಾಲನೆ ನೀಡಿದರು. ಪ್ರಮುಖರಾದ ಸುನೀಲ್, ಜಯಶ್ರೀ, ರೇಣುಕಾ, ಅನ್ವರ, ಹನುಮಂತ, ಶ್ರೀನಿವಾಸ, ಲಕ್ಷ್ಮವ್ವ, ಪ್ರತಿಭಾ, ವೀರಭದ್ರಯ್ಯ, ಇತರರಿದ್ದರು.
Published on

ಅಳವಂಡಿ: ಮಹಿಳಾ ಒಕ್ಕೂಟದ ಸಂಜೀವಿನಿ ಸಂಘದ ಸದಸ್ಯೆಯರು ತಯಾರಿಸಿದ ವಿವಿಧ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಲಾಗುವುದು ಎಂದು ಎಸ್‌ವಿಇಪಿ ತಾಲೂಕಾ ಕಾರ್ಯಕ್ರಮ ವ್ಯವಸ್ಥಾಪಕ ನವೀನಕುಮಾರ ಶಿಳ್ಳಿನ ತಿಳಿಸಿದರು.

ಗ್ರಾಮದ ಬಸ್ ನಿಲ್ದಾಣದ ಹತ್ತಿರ ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ, ಸಂಜೀವಿನಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ, ಜಿಪಂ, ತಾಪಂ ಕೊಪ್ಪಳ, ಸಂಜೀವಿನಿ ಮಹಿಳಾ ಒಕ್ಕೂಟದ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ಹಮ್ಮಿಕೊಂಡಿದ್ದ ದೀಪ ಸಂಜೀವಿನಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಭಾನುವಾರ ಮಾತನಾಡಿದರು.

ಮಹಿಳಾ ಸ್ವ ಸಹಾಯ ಸಂಘಗಳ ಸದಸ್ಯೆಯರು ಆರ್ಥಿಕವಾಗಿ ಸಬಲರಾಗಲು ಸಂಜೀವಿನಿ ಕಾರ್ಯಕ್ರಮಗಳು ಪ್ರಮುಖ ಪಾತ್ರ ವಹಿಸುತ್ತವೆ. ಬೆಳಕಿನ ಹಬ್ಬ ದೀಪಾವಳಿ ಪ್ರಯುಕ್ತ ದೀಪ ಸಂಜೀವಿನಿ ಕಾರ್ಯಕ್ರಮದಡಿ ಮಾರುಕಟ್ಟೆ ವ್ಯವಸ್ಥೆ ಒದಗಿಸಲಾಗಿದೆ. ಮಹಿಳೆಯರು ಪರಿಶ್ರಮ ಹಾಗೂ ಸೃಜನಶೀಲತೆಯಿಂದ ತಯಾರಿಸಿದ ಆಕರ್ಷಕ ದೀಪಗಳನ್ನು ಮಾರಾಟ ಮಾಡಲಾಗುತ್ತಿದೆ. ಸಾರ್ವಜನಿಕರು ಸ್ವದೇಶಿ ಉತ್ಪನ್ನಗಳನ್ನು ಖರೀದಿಸಿ ಮಹಿಳೆಯರ ಸ್ವಾವಲಂಬಿ ಬದುಕಿಗೆ ಪ್ರೇರೆಪಿಸಬೇಕು ಎಂದರು.

ಒಕ್ಕೂಟದ ಕಾರ್ಯದರ್ಶಿ ಜಯಶ್ರೀಹಂಚಿನಾಳ, ಖಜಾಂಚಿ ರೇಣುಕಾ ಹಳ್ಳಿಗುಡಿ, ಪ್ರಮುಖರಾದ ಅನ್ವರ ಗಡಾದ, ಶ್ರೀನಿವಾಸ ಕಲಾದಗಿ, ಲಕ್ಷ್ಮವ್ವ, ಪ್ರತಿಭಾ ಮೇಟಿ, ಹನುಮಂತ ಜಾಣಗಾರ, ವೀರಭದ್ರಯ್ಯ ಶಿರೂರಮಠ, ಬಿಆರ್‌ಪಿ ಸವಿತಾ, ಎಮ್‌ಬಿಕೆ ಮಲ್ಲಮ್ಮ ಭಾವಿಹಳ್ಳಿ, ಸಿಆರ್‌ಪಿ ಇಪಿ ಸವಿತಾ, ಲತಾ, ರೇಖಾ, ಒಕ್ಕೂಟದ ಪ್ರತಿಭಾ ಬಣ್ಣದ, ಗೀತಾ ಕಿಲ್ಲೇದ ಹಾಗೂ ಸ್ವ ಸಹಾಯ ಸಂಘದ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net