ಹಣತೆ ಹಚ್ಚಿ ಕ್ರೀಡಾಸಕ್ತಿ ಹೆಚ್ಚಿಸುವ ಪ್ರಯತ್ನ:: ಅಳವಂಡಿಯ ಬಿಸಿಆರ್ ಅಕಾಡೆಮಿ ಕಬಡ್ಡಿ ಕ್ಲಬ್‌ನಿಂದ ವಿಶಿಷ್ಟ ಆಚರಣೆ

25102022 alavandi devali festive celbrate
Published on

ಅಳವಂಡಿ: ದೀಪಾವಳಿ ಬಂತೆಂದರೆ ಸಾಕು.. ಮನೆಗಳು, ಅಂಗಡಿಗಳಲ್ಲಿ ಸಂಭ್ರಮದಿಂದ ಹಬ್ಬ ಆಚರಿಸಲಾಗುತ್ತದೆ. ಹೊಸ ಉಡುಗೆ ತೊಟ್ಟು, ಅಲಂಕಾರಿಕ ವಸ್ತುಗಳು, ತಳಿರು-ತೋರಣ ಹಾಗೂ ಹೂಗಳಿಂದ ಅಲಂಕರಿಸಿದ ಲಕ್ಷ್ಮೀಯನ್ನು ಪ್ರತಿಷ್ಠಾಪಿಸಿ ದೀಪ ಬೆಳಗಿ ಅದ್ದೂರಿಯಿಂದ ದೀಪಾವಳಿ ಆಚರಿಸುತ್ತಾರೆ.

ಈ ನಡುವೆ ಗ್ರಾಮದ ಬಿಸಿಆರ್ ಅಕಾಡೆಮಿ ಕಬಡ್ಡಿ ಕ್ಲಬ್ ಹಬ್ಬವನ್ನು ವಿಶೇಷವಾಗಿ ಆಚರಿಸುವ ಮೂಲಕ ಗಮನ ಸೆಳೆದಿದೆ. ಗ್ರಾಮದ ಶ್ರೀ ಸಿದ್ದೇಶ್ವರ ಕಾಲೇಜು ಜಾಗದಲ್ಲಿ ಕಬಡ್ಡಿ ಮೈದಾನದ ಮಾದರಿಯಲ್ಲಿ ಸುಮಾರು 200 ದೀಪಗಳನ್ನು ಹಚ್ಚಿ, ಹೂಗಳಿಂದ ಅಲಂಕರಿಸಿದ ಲಕ್ಷ್ಮೀಯನ್ನು ಇಟ್ಟು ವಿಶೇಷ ಪೂಜೆ ಸಲ್ಲಿಸಿದೆ.

ಕ್ಲಬ್‌ನ ಪರಶು ತಳವಾರ ಮಾತನಾಡಿ, ನಿತ್ಯವೂ ಮಕ್ಕಳು ಕ್ರೀಡೆಯಲ್ಲಿ ಪಾಲ್ಗೊಳ್ಳುವಂತೆ ಮಾಡುವುದೇ ವಿಶಿಷ್ಟ ಆಚರಣೆಗೆ ಕಾರಣ ಎಂದರು. ಕ್ರೀಡಾಪಟು ಮಹಾಂತೇಶ ಸುಣಗಾರ ಮಾತನಾಡಿ, ಕಾಲೇಜು ಮೈದಾನದಲ್ಲಿ ದೀಪಗಳನ್ನು ಬೆಳಗಿ ಯುವಕರಲ್ಲಿ ಕ್ರೀಡಾಸಕ್ತಿ ಮಾಡುವಂತೆ ಮಾಡಿದ್ದು ಸಂತಸವಾಗಿದೆ. ಕ್ರೀಡೆ ರೂಪಕದಲ್ಲಿ ಬೆಳಕಿನ ಹಬ್ಬ ಆಚರಿಸಿದ್ದು ಶ್ಲಾಘನೀಯ ಎಂದರು. ಯುವಕರಾದ ಕೆ.ಪರಶುರಾಮ, ಮಾರುತಿ ಮೇವುಂಡಿ, ಬಿ.ಶಿವು, ಸಂದೀಪ್, ಆಕಾಶ ಬನ್ನಿಗೋಳ, ಸಂತೋಷ, ದುರ್ಗೆಶ ಪುರದ, ಶಿವರಾಜ ಪುರದ, ಮಹೇಶ ಪೂಜಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net