ಜಾನಪದ-ಬಯಲಾಟ ಅರಿವು ಅವಶ್ಯ, ಕಲಾ ಶಿಕ್ಷಣ ಕಾರ್ಯಕ್ರಮಾಧಿಕಾರಿ ರಾಧಿಕಾ ಭಾರದ್ವಾಜ್ ಹೇಳಿಕೆ

Training meeting
ಅಳವಂಡಿಯ ಕಸ್ತೂರಬಾ ಗಾಂಧಿ ಬಾಲಕಿಯರ ವಸತಿ ನಿಲಯದಲ್ಲಿ ಜಾನಪದ ನೆಲೆಗಟ್ಟಿನ ಕಥೆಗಳು ಹಾಗೂ ಬೈಲಾಟ ಕುರಿತು ತರಬೇತಿ ಸಭೆ ನಡೆಯಿತು. ಮುಖ್ಯ ಶಿಕ್ಷಕಿ ಜಯಾ ತಳಗೇರಿ, ರಂಗ ಕಲಾವಿದೆ ರಾಧಿಕಾ ಭಾರದ್ವಾಜ್, ಅಕ್ಕಮ್ಮ ದೇವರಮನಿ, ಶಿಕ್ಷಕರಾದ ಫಕೀರಮ್ಮ ಮಠದ, ಸುನಿತಾ, ಮೇಲ್ವಿಚಾರಕಿ ಚನ್ನಮ್ಮ ಚಿನ್ನೂರು ಇತರರಿದ್ದರು.
Published on

ಅಳವಂಡಿ: ಗ್ರಾಮದ ಕಸ್ತೂರಬಾ ಗಾಂಧಿ ಬಾಲಕಿಯರ ವಸತಿ ನಿಲಯದಲ್ಲಿ ಇಂಡಿಯಾ ಫೌಂಡೇಷನ್ ಫಾರ್ ದಿ ಆರ್ಟ್ಸ್ ವತಿಯಿಂದ ಕಲಿ ಕಲಿಸು ಕಲಾ ಅಂತರಗತ ಪ್ರಯೋಗ ಯೋಜನೆ ಅಡಿ ಆಯ್ಕೆಯಾದ ಮಕ್ಕಳೊಂದಿಗೆ ಜಾನಪದದ ನೆಲೆಗಟ್ಟಿನ ಕಥೆಗಳು ಹಾಗೂ ಬೈಲಾಟ ಕುರಿತು ತರಬೇತಿ ಸಭೆ ಮಂಗಳವಾರ ನಡೆಯಿತು.

ಕಲಾ ಶಿಕ್ಷಣ ಕಾರ್ಯಕ್ರಮಾಧಿಕಾರಿ ರಾಧಿಕಾ ಭಾರದ್ವಾಜ್ ಮಾತನಾಡಿ, ಗಂಡು ಮಕ್ಕಳಂತೆ ಹೆಣ್ಣು ಮಕ್ಕಳು ಬೈಲಾಟ, ಜಾನಪದ ಸಂಸ್ಕೃತಿ, ಕುಣಿತ ಹಾಗೂ ಹಾಡುಗಳನ್ನು ಕಲಿಸುವುದು ಹಾಗೂ ಇವುಗಳನ್ನು ಮಕ್ಕಳಿಗೆ ಪರಿಚಯಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಇದಕ್ಕೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಸಹಕಾರ ಅಗತ್ಯವಾಗಿದೆ. ವಿದ್ಯಾರ್ಥಿಗಳು ಪ್ರತಿ ವಿಷಯವನ್ನು ಅರಿತು ಕಲಿಯುವುದರ ಜತೆಗೆ ಉತ್ಸಾಹದಿಂದ ಭಾಗವಹಿಸಿ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಬೈಲಾಟದ ಹೆಜ್ಜೆಗಳು, ಹಾಡುಗಳು, ವೇಷಭೂಷಣ, ಕುಣಿತಗಳು, ಹೆಗ್ಗಪ್ಪನ ಜನಪದ ನೆಲೆಗಟ್ಟಿನ ಸಾಂಸ್ಕೃತಿಕ ಆಚರಣೆಗಳು, ಹೆಗ್ಗಪ್ಪನ ಕಥೆ ಹೇಳುವುದು, ಬರೆಯುವುದು, ಕಟ್ಟುವುದು ಹಾಗೂ ರಂಗದ ಮೇಲೆ ತರುವುದು, ಮಕ್ಕಳ ಕಥೆಗಳು ಚರ್ಚೆ ಮಾಡುವುದು ಹೀಗೆ ಹಲವಾರು ವಿಷಯಗಳ ಕುರಿತು ವಿದ್ಯಾರ್ಥಿಗಳೊಂದಿಗೆ ಚರ್ಚಿಸಲಾಯಿತು ಹಾಗೂ ತರಬೇತಿ ನೀಡಲಾಯಿತು.

ಮುಖ್ಯ ಶಿಕ್ಷಕಿ ಜಯಾ ತಳಗೇರಿ, ರಂಗ ಕಲಾವಿದೆ ಅಕ್ಕಮ್ಮ ದೇವರಮನಿ, ಶಿಕ್ಷಕರಾದ ಫಕೀರಮ್ಮ ಮಠದ, ಸುನಿತಾ, ಮೇಲ್ವಿಚಾರಕಿ ಚನ್ನಮ್ಮ ಚಿನ್ನೂರು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net