ಆರೋಗ್ಯಕರ ಜೀವನಕ್ಕೆ ಸಹಕಾರಿಘಟ್ಟಿರಡ್ಡಿಹಾಳ

Untitled design(3)
Published on

ಅಳವಂಡಿ: ಪರಿಸರ ಉತ್ತಮವಾಗಿದ್ದಲ್ಲಿ ಮಾತ್ರ ಆರೋಗ್ಯದಿಂದ ಇರಲು ಸಾಧ್ಯ ಎಂದು ಮುಖ್ಯ ಶಿಕ್ಷಕ ಮಹಮದ್ ರಫಿ ಹೇಳಿದರು. ಸಮೀಪದ ಘಟ್ಟಿರಡ್ಡಿಹಾಳ ಸ.ಹಿ.ಪ್ರಾ. ಶಾಲೆಯಲ್ಲಿ ವಿಶ್ವ ಪರಿಸರ ದಿನ ಅಂಗವಾಗಿ ಶಾಲೆ ಆವರಣದಲ್ಲಿ ಗಿಡ ನೆಡುವ ಕಾರ್ಯಕ್ಕೆ ಚಾಲನೆ ನೀಡಿ ಗುರುವಾರ ಮಾತನಾಡಿದರು. ಪಾಲಕರು ಮಕ್ಕಳು ಗಿಡ ನೆಟ್ಟು ಪೋಷಿಸುವಂತೆ ಪ್ರೋತ್ಸಾಹಿಸಬೇಕು. ಪರಿಸರ ಗಿಡಗಳಿಂದ ತುಂಬಿದ್ದರೆ ಮಾತ್ರ ಮನುಷ್ಯ ಆರೋಗ್ಯಕರ ಜೀವನ ನಡೆಸಲು ಸಾಧ್ಯ. ಸಕಾಲಕ್ಕೆ ಮಳೆ ಬೆಳೆ ಆಗಿ ನಾಡು ಸಮೃದ್ಧವಾಗಲು ಸಾಧ್ಯ. ಪರಿಸರವನ್ನು ಪಾಲಕರಂತೆ ಪೂಜಿಸಬೇಕು ಎಂದರು. ಶಿಕ್ಷಕರಾದ ಕಾವ್ಯಾ, ನೇತ್ರಾ, ಗಂಗಮ್ಮ ಹಾಗೂ ಮಕ್ಕಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net