

ಅಳವಂಡಿ: ಬೆಟಗೇರಿ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಭಿವೃದ್ಧಿ ಸಂಸ್ಥೆಯಿಂದ ಬೃಂದಾವನ ಜ್ಞಾನವಿಕಾಸ ಕೇಂದ್ರದ ಸದಸ್ಯರಿಗೆ ಆಯೋಜಿಸಿದ್ದ ಹೊಲಿಗೆ ತರಬೇತಿ ಕಾರ್ಯಕ್ರಮಕ್ಕೆ ತಾಲೂಕಿನ ಯೋಜನಾಧಿಕಾರಿ ಜಗದೀಶ ಕೆ.ಎಚ್. ಜ್ಯೋತಿ ಬೆಳಗಿಸಿ ಗುರುವಾರ ಚಾಲನೆ ನೀಡಿದರು.
ಮಹಿಳೆಯರು ಮೂರು ತಿಂಗಳು ತರಬೇತಿ ಪಡೆದು ಸ್ವ ಉದ್ಯೋಗ ಆರಂಭಿಸಬೇಕು. ಮಹಿಳೆಯರು ವಿದ್ಯೆ ಕಲಿತು ಕುಟುಂಬ ನಿರ್ವಹಣೆ ಮಾಡುವ ಚಾಣಾಕ್ಷತನ ಹೊಂದಿರಬೇಕು. ಆರ್ಥಿಕ ಪ್ರಗತಿಯಿಂದ ಕುಟುಂಬದ ಅಭಿವೃದ್ಧಿ ಸಾಧ್ಯ ಎಂದರು.
ಮುಖಂಡರಾದ ಇಮಾಮ ಸಾಬ, ಬಿಬಿಜಾನ, ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಗೀತಾ, ಸಂಯೋಜಕರು ಉಮೇಶ, ತರಬೇತಿ ಶಿಕ್ಷಕರು ಗಂಗಮ್ಮ ಹೂಗಾರ, ಸೇವಾ ಪ್ರತಿನಿಧಿಗಳು ಹಾಗೂ ಮಹಿಳಾ ಸದಸ್ಯರು ಇದ್ದರು.