ಮಕ್ಕಳ ಬದುಕಿನ ಮೌಲ್ಯ ಅರಿಯಲಿ

Untitled design
ಅಳವಂಡಿ ಗ್ರಾಮದಲ್ಲಿ ಬುಧವಾರ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಹಾಗೂ ಉತ್ತಮ ಶಿಕ್ಷಕರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮವನ್ನು ಗಿಡಕ್ಕೆ ನೀರು ಹಾಕಿ ಗಣ್ಯರು ಚಾಲನೆ ನೀಡಿದರು. ಪ್ರಮುಖರಾದ ಮರುಳಾರಾಧ್ಯ ಶಿವಾಚಾರ್ಯರು, ಯೋಗಿನಿ ಅಕ್ಕ, ಪ್ರಾಣೇಶ ಪೂಜಾರ, ಶಂಕ್ರಮ್ಮ, ಗುರು, ಅನ್ವರ್, ರಫೀಕ್, ಬಸವರಾಜ ಇತರರಿದ್ದರು.
Published on

ಅಳವಂಡಿ: ದೇಶದ ಪ್ರಸಿದ್ಧ ವ್ಯಕ್ತಿಗಳನ್ನು ನಿರ್ಮಾಣ ಮಾಡುವ ಶಕ್ತಿ ಶಿಕ್ಷಕರಿಗಿದೆ. ಮಕ್ಕಳು ಶಿಕ್ಷಣದ ಜೊತೆಗೆ ಬದುಕಿನ ಮೌಲ್ಯಗಳನ್ನು ರೂಢಿಸಿಕೊಳ್ಳಿ. ಶಿಕ್ಷಕರು ಸಮಾಜವನ್ನು ನಿರ್ಮಾಣ ಮಾಡುವ ನಿರ್ಮಾತೃಗಳು ಎಂದು ಕೊಪ್ಪಳದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ಯೋಗಿನಿ ಅಕ್ಕ ತಿಳಿಸಿದರು.

ಗ್ರಾಮದಲ್ಲಿ ವಿವೇಕಾನಂದ ಪ್ರೌಢಶಾಲೆಯಲ್ಲಿ ಅಳವಂಡಿ ಹೋಬಳಿ ಪತ್ರಕರ್ತರ ಬಳಗದಿಂದ ಬುಧವಾರ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಹಾಗೂ ಉತ್ತಮ ಶಿಕ್ಷಕರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪತ್ರಕರ್ತರು ಸರಸ್ವತಿ ಪುತ್ರರು. ಹರಿತವಾದ ಲೇಖನಿಯ ಮೂಲಕ ಸಮಾಜದ ಏಳೆಗೆಗಾಗಿ ಶ್ರಮಿಸುತ್ತಿದ್ದಾರೆ. ಪತ್ರಕರ್ತರು ಮಾನಸಿಕವಾಗಿ ಸದೃಢರಾಗಿ ಸಮಾಜದ ಜೊತೆಗೆ ಬೆರೆಯುವ ಕೌಶಲ್ಯ ಬೆಳೆಸಿಕೊಳ್ಳಿ. ಹಾಗೂ ಸಮಾಜದ ಅಂಕುಡೊಂಕು ತಿದ್ದುವ ಕಾರ್ಯ ಮಾಡಿ ತಿಳಿಸಿದರು.
ಮರುಳಾರಾಧ್ಯ ಶಿವಾಚಾರ್ಯರು ಮಾತನಾಡಿ, ಸ್ವಸ್ಥ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ದೊಡ್ಡದಿದೆ. ಶಿಕ್ಷಕರು ಕೂಡ ಮಕ್ಕಳ ಜ್ಞಾನದ ಹಸಿವು ತೀರಿಸಬೇಕು. ಶಿಕ್ಷಣ ಇದ್ದರೆ ಮಾತ್ರ ನೆಮ್ಮದಿ ಜೀವನ ನಡೆಸಲು ಸಾಧ್ಯ ಎಂದರು. ಸಾಹಿತಿ ಪ್ರಾಣೇಶ ಪೂಜಾರ ಮಾತನಾಡಿದರು.

ಶಿಕ್ಷಣ ಕ್ಷೇತ್ರದಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ಉತ್ತಮ ಶಿಕ್ಷಕರಿಗೆ ಶಿಕ್ಷಣ ಸಿರಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಗ್ರಾಪಂ ಅಧ್ಯಕ್ಷೆ ಶಂಕ್ರಮ್ಮ ಜೋಗಿನ, ಪ್ರಮುಖರಾದ ಎ.ಟಿ.ಕಲ್ಮಠ, ಹೇಮರಡ್ಡಿ ಕಲ್ಗುಡಿ, ಬಸವರಡ್ಡಿ ಹಳ್ಳಿಕೇರಿ, ಗ್ಯಾನಪ್ಪ ಹಳ್ಳಿಕೇರಿ, ಅನ್ವರ ಹುಸೇನ ಗಡಾದ, ಪಿಎಸ್‌ಐ ಪ್ರಹ್ಲಾದ್ ನಾಯಕ, ಗುರುಬಸವರಾಜ ಹಳ್ಳಿಕೇರಿ, ವೆಂಕರಡ್ಡಿ ಇಮ್ಮಡಿ, ಬಿ.ಎನ್.ಹೊರಪೇಟಿ, ಜೂನಸಾಬ ವಡ್ಡಟ್ಟಿ, ಸುರೇಶ ಸಂಗರಡ್ಡಿ, ರಫಿಕ ಬಳಿಗಾರ, ಬಸವರಾಜ ತಳಕಲ್, ನೀಲಪ್ಪ ಹಕ್ಕಂಡಿ, ರಮೇಶ ಸುಣಗಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net