ಹಲವಾಗಲಿ-ಕೇಸಲಾಪುರ ರಸ್ತೆ ದುರಸ್ತಿ ಕಾರ್ಯ ಆರಂಭ

11112022 alavandi road repair
Published on

ಅಳವಂಡಿ: ಹಲವಾಗಲಿ, ಕೇಸಲಾಪುರ, ಹೈದರನಗರ ಗ್ರಾಮ ಸಂಪರ್ಕಿಸುವ ರಸ್ತೆ ದುರಸ್ತಿ ಕಾರ್ಯಕ್ಕೆ ಬೋಚನಹಳ್ಳಿ ಗ್ರಾಪಂ ಮುಂದಾಗಿದೆ.

ಹದಗೆಟ್ಟ ರಸ್ತೆ ಹಾಗೂ ಎರಡೂ ಬದಿ ಮುಳ್ಳುಕಂಟಿ ಬೆಳೆದು ವಾಹನಗಳ ಸಂಚಾರಕ್ಕೆ ಸಮಸ್ಯೆಯಾಗಿತ್ತು. ಅಲ್ಲದೆ ಬಸ್ ಸಂಚಾರ ಸ್ಥಗಿತಗೊಂಡಿತ್ತು. ಹೀಗಾಗಿ ಹಲವಾಗಲಿ ಗ್ರಾಮದಲ್ಲಿ ಗುರುವಾರ ವಿದ್ಯಾರ್ಥಿಗಳು ಬಸ್ ತಡೆದು ಕೆಲ ಕಾಲ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಬೋಚನಹಳ್ಳಿ ಗ್ರಾಪಂ ಅಧ್ಯಕ್ಷರು, ಸದಸ್ಯರು ರಸ್ತೆ ದುರಸ್ತಿ ಭರವಸೆ ನೀಡಿದ್ದರು. ಅದರಂತೆ ಶುಕ್ರವಾರ ಜನಪ್ರತಿನಿಧಿಗಳು, ಜೆಸಿಬಿ ಮೂಲಕ ರಸ್ತೆ ಗುಂಡಿಗಳ ಮುಚ್ಚುವ ಹಾಗೂ ಮುಳ್ಳುಕಂಟಿ ತೆರವುಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಿದರು. ಗ್ರಾಪಂ ಅಧ್ಯಕ್ಷ ನಿಂಗಪ್ಪ ಆವೂಜಿ ಮಾತನಾಡಿ, ಹಲವಾಗಲಿ, ಕೇಸಲಾಪುರ ಮಾರ್ಗವಾಗಿ ಹೈದರನಗರವರೆಗೆ ರಸ್ತೆಯಲ್ಲಿ ಗುಂಡಿಗಳು ಬಿದ್ದು ಹಾಗೂ ರಸ್ತೆ ಬದಿ ಜಾಲಿಗಿಡಗಳು ಬೆಳೆದು ಸಂಚಾರ ಕಷ್ಟವಾಗಿತ್ತು. ಸದ್ಯ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ ಎಂದು ತಿಳಿಸಿದರು. ಪ್ರಮುಖರಾದ ಸಿದ್ದಣ್ಣ ಹಳ್ಳಿ, ನಿಂಗಪ್ಪ ಮೇಟಿ, ಸಾರೆಪ್ಪ, ಚನ್ನಪ್ಪ, ಸಂತೋಷ ಹಳ್ಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net