ಎಲ್ಲರೂ ಜಾತಿ ಬಿಟ್ಟು ಧರ್ಮಕ್ಕೆ ಶರಣಾಗಲಿ: ಕುದರಿಮೋತಿ ಸಂಸ್ಥಾನಮಠದ ವಿಜಯ ಮಹಾಂತ ಸ್ವಾಮೀಜಿ ಸಲಹೆ

17042022 Alavandi mass marrige
Published on

ಅಳವಂಡಿ: ಪ್ರಸ್ತುತ ದಿನಗಳಲ್ಲಿ ಜಾತೀಯತೆ ಹೆಚ್ಚುತ್ತಿದೆ. ಅದರಿಂದ ಅಭಿವೃದ್ಧಿ ಸಾಧ್ಯವಿಲ್ಲ. ಜಾತಿ ವಿಷವಾದರೆ, ಧರ್ಮ ಅಮೃತ ಇದ್ದ ಂತೆ. ಆದ್ದರಿಂದ ಎಲ್ಲರೂ ಜಾತಿ ಬಿಟ್ಟು ಧರ್ಮಕ್ಕೆ ಶರಣಾಗಬೇಕು. ಕಾಯಕದಲ್ಲಿ ಕೈಲಾಸ ಕಾಣಬೇಕು ಎಂದು ಕುದರಿಮೋತಿ ಸಂಸ್ಥಾನಮಠದ ವಿಜಯ ಮಹಾಂತ ಸ್ವಾಮೀಜಿ ಹೇಳಿದರು.

ಸಮೀಪದ ವದಗನಾಳ ಗ್ರಾಮದಲ್ಲಿ ಶ್ರೀ ಹಮ್ಮಿಗೇಶ್ವರ ಜಾತ್ರೆ ನಿಮಿತ್ತ ಭಾನುವಾರ ಏರ್ಪಡಿಸಿದ್ದ ಸಾಮೂಹಿಕ ವಿವಾಹ ಹಾಗೂ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು. ಮೈನಳ್ಳಿ-ಬಿಕನಳ್ಳಿಯ ಸಿದ್ಧೇಶ್ವರ ಶ್ರೀಗಳು ಮಾತನಾಡಿ, ಸಂಪತ್ತು ಹೆಚ್ಚಾದಂತೆ ವಿಪತ್ತು ಜಾಸ್ತಿಯಾಗುತ್ತದೆ. ನಂಬಿಕೆಯಿಂದ, ನಿರ್ದಿಷ್ಟ ಗುರಿಯೊಂದಿಗೆ ಜೀವನ ನಡೆಸಬೇಕು. ಇತರರಿಗೆ ಒಳಿತು ಮಾಡಿದರೆ ಹೆಸರು ಅದಾಗಿಯೇ ಬರುತ್ತದೆ ಎಂದರು. ಬಿಜೆಪಿ ಮುಖಂಡ ಸಿ.ವಿ.ಚಂದ್ರಶೇಖರ ಮಾತನಾಡಿದರು. 23 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ನಂತರ ಸಾಧಕರಿಗೆ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು. ಮಂಗಳೂರಿನ ಗುರುಶಾಂತವೀರ ಶಿವಾಚಾರ್ಯರು, ಸಂಗನಾಳದ ಶಾಂತವೀರ ಸ್ವಾಮೀಜಿ, ಬೆದವಟ್ಟಿಯ ಸಂಗಮೇಶ್ವರ ಸ್ವಾಮೀಜಿ, ಹಿರೇಸಿಂದೋಗಿಯ ಚಿದಾನಂದ ಸ್ವಾಮೀಜಿ, ಪ್ರಮುಖರಾದ ಡಾ.ಪಿ.ಎಂ.ಬಸವರಾಜ, ಡಾ.ಎಂ.ಎಸ್ ಪಾಟೀಲ್, ತಿಮ್ಮನಗೌಡರ, ಸಿ.ಕೆ.ಪಾಟೀಲ್, ರಾಮೇಶ ಅಳವಂಡಿ, ಪ್ರಕಾಶ ಚನ್ನನಗೌಡ್ರ, ಪ್ರಭು ಶಿವನಗೌಡ್ರ, ಜಿ.ಎಸ್.ಬಿಸರಳ್ಳಿ, ಬಸನಗೌಡ ಗೊಂದಿಹೊಸಳ್ಳಿ, ಬಸನಗೌಡ ಪಾಟೀಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net